ಬಹುತೇಕ ಮನೆಗಳಲ್ಲಿ ಗ್ಯಾಸ್ ಲೀಕೆಜ್ ಗೆ ಕಾರಣ ಏನೆಂದರೆ ಗ್ಯಾಸ್ ಪೈಪ್. ಹೌದು ಇದನ್ನು ಎರಡು ಭಾಗದಲ್ಲಿ ಸರಿಯಾಗಿ ಫಿಟ್ ಮಾಡದಿದ್ದರೆ ಅಥವಾ ಕೆಲವೊಂದು ಕಡೆ ಒಡೆದು ಹೋಗಿದ್ದರೆ ಅದರಿಂದ ಗ್ಯಾಸ್ ಲೀಕೆಜ್ ಆಗುವ ಸಾಧ್ಯತೆ ಇರುತ್ತದೆ.
ಇನ್ನೊಂದು ಪ್ರಮುಖ ಕಾರಣ ಎಂದರೆ ಅದು ನಿಮಗೆ ಗೊತ್ತಾಗಿ ಸಹ ನಿಮ್ಮ ನಿರ್ಲಕ್ಷದಿಂದ ಉಂಟಾಗುವ ಸಮಸ್ಯೆಯಾಗಿದ್ದು, ನೀವು ಒಲೆಯ ಮೇಲೆ ಯಾವುದಾದರೂ ಆಹಾರ ಪದಾರ್ಥವನ್ನು ಕುದಿಯಲು ಇಟ್ಟು ನಿಮ್ಮ ಪಾಡಿಗೆ ನೀವು ಸುಮ್ಮನೆ ನೋಡಿಕೊಂಡು ಕುಳಿತರೆ, ಕುದಿಯುವ ಸಂದರ್ಭದಲ್ಲಿ ಆಹಾರ ಉಕ್ಕು ಬಂದು ಗ್ಯಾಸ್ ಸ್ಟವ್ ಬರ್ನರ್ ಮೇಲೆ ಚೆಲ್ಲಿದಂತಹ ಸಂದರ್ಭದಲ್ಲಿ ಬೆಂಕಿ ಆರಿ ಹೋಗಿ ಗ್ಯಾಸ್ ಮಾತ್ರ ಹೊರ ಬರುತ್ತಿರುತ್ತದೆ. ಈ ರೀತಿಯ ಲೀಕೇಜ್ ಬಹಳಷ್ಟು ಡೇಂಜರ್ ಎಂಬುದನ್ನು ಜನರು ನೆನಪಿನಲ್ಲಿ ಮೊದಲು ಇಟ್ಟುಕೊಳ್ಳಬೇಕು.
ಗ್ಯಾಸ್ ಲೀಕೆಜ್ ಆದಾಗ ನೀವು ಏನು ಮಾಡಬೇಕು?
* ಒಂದು ವೇಳೆ ಗ್ಯಾಸ್ ಲೀಕೇಜ್ ಆಗಿ ಅನಿಲ ಸೋರಿಕೆ ವಾಸನೆ ಬಂದ ತಕ್ಷಣ ಮನೆಯಲ್ಲಿ ಹಚ್ಚಿರುವ ದೇವರ ದೀಪ, ಗಂಧದ ಕಡ್ಡಿ ಎಲ್ಲವನ್ನೂ ಒಮ್ಮೆಲೇ ಆರಿಸಿಬಿಡಿ.
* ಇನ್ನು ಗ್ಯಾಸ್ ಲೀಕೇಜ್ ಆದಾಗ ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಗ್ಯಾಸ್ ಲೈಟರ್ ಉಪಯೋಗಿಸಬೇಡಿ
* ಗ್ಯಾಸ್ ಲೀಕೇಜ್ ಆದ ಸಂದರ್ಭದಲ್ಲಿ ಮನೆಯ ಯಾವುದೇ ಭಾಗದಲ್ಲಿ ಎಲೆಕ್ಟ್ರಿಕ್ ಸ್ವಿಚ್ ಗಳನ್ನು ಆನ್/ ಆಫ್ ಮಾಡಬೇಡಿ. ಇನ್ನು ಲೈಟ್ ಬಲ್ಬ್/ ಫ್ಯಾನ್ ಆನ್ ಆಗಿದ್ದರೆ ಅದನ್ನು ಹಾಗೆ ಬಿಡಿ.
* ಬೇರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಚಾಲ್ತಿ ಮಾಡಬೇಡಿ.
* ಇನ್ನು ಸಾಧ್ಯವಾದಷ್ಟು ಬೇಗ ನಿಮ್ಮ ಮನೆಯ ಎಲ್ಲಾ ಕಿಟಕಿ & ಬಾಗಿಲುಗಳನ್ನು ತೆಗೆದುಬಿಡಿ.