ಚಿತ್ರದುರ್ಗ: ಮದುವೆ ಪೂರ್ವ ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರನ್ನು ಸಮರ್ಪಕವಾಗಿ ಹಾಕದ ಪರಿಣಾಮ ಭುಗಿಲೆದ್ದ ಜಗಳ, ಜಿಲ್ಲೆಯ ಹಿರಿಯೂರು ನಗರದಲ್ಲಿ ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭವನ್ನೇ ರದ್ದುಗೊಳಿಸಲು ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರಿನ ಎನ್. ಮನೋಜ್ ಕುಮಾರ್ ಮತ್ತು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿಯ ಸಿ.ಎ. ಅನಿತಾ ಅವರ ವಿವಾಹದ ಪೂರ್ವಭಾವಿ ಆರತಕ್ಷತೆ ಶನಿವಾರ ರಾತ್ರಿ ಬಲಿಜಾ ಶ್ರೇಯಾ ಭವನದಲ್ಲಿ ನಡೆಯಿತು.
ಅಡುಗೆ ಸಿಬ್ಬಂದಿ ಅವರಿಗೆ ಕುಡಿಯುವ ನೀರನ್ನು “ಸರಿಯಾಗಿ” ಪೂರೈಸದ ಕಾರಣ ವಧು ಮತ್ತು ವರನ ಕಡೆಯವರ ಸಂಬಂಧಿಕರ ನಡುವೆ ಜಗಳವಾಯಿತು.
ಶನಿವಾರ ರಾತ್ರಿ ಆರಂಭವಾದ ಜಗಳ ಭಾನುವಾರ ಬೆಳಿಗ್ಗೆ ಕೂಡ ಮುಂದುವರೆಯಿತು. ಭಾನುವಾರ ಬೆಳಿಗ್ಗೆ 10.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ‘ಸಾಕಷ್ಟು ಮಧ್ಯಸ್ಥಿಕೆ ವಹಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ಅಂತಿಮವಾಗಿ, ವಧು ಮತ್ತು ವರ ಜಗಳದಲ್ಲಿ ತೊಡಗಿದ ನಂತರ ಮದುವೆಯನ್ನು ರದ್ದುಗೊಳಿಸಲಾಯಿತು.