ಆರೋಗ್ಯ ಇಲಾಖೆಯಿಂದ ಎಚ್ಚರಿಕೆ:
ಬೇಸಿಗೆ ಆರಂಭವಾದಂತೆ ರಾಜ್ಯದಲ್ಲಿ ಬಿಸಿಲಿನ ಬೇಗೆಯೂ ಹೆಚ್ಚಾಗತೊಡಗಿದ್ದು, ಜನರು ಅಸ್ವಸ್ಥರಾಗುವುದನ್ನು ತಪ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆಯ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೌದು, ಹೆಚ್ಚು ನೀರು ಕುಡಿಯುವುದು, ಪ್ರಯಾಣದ ನೀರನ್ನು ಹೊಯ್ಯುವುದು, ನಿಂಬೆ ಹಣ್ಣಿನ ಶರಬತ್ತು, ಕಲ್ಲಂಗಡಿ, ಕಿತ್ತಳೆ ದ್ರಾಕ್ಷಿ, ಅನನಾಸ್, ಸೌತೆಕಾಯಿ, ಎಳನೀರನ್ನು ಸೇವಿಸಬೇಕು.
ಮೆತ್ತಗಿನ ಹತ್ತಿ ಬಟ್ಟೆ ಧರಿಸುವುದು, ಪಾದರಕ್ಷೆ ಧರಿಸುವುದು ಉತ್ತಮ ಎಂದಿದೆ.
ಇನ್ನು, ನವಜಾತ ಶಿಶುಗಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕಾರ್ಯನಿರ್ವಹಿಸುವವರು, ರೋಗಿಗಳು, ವೃದ್ಧರು ಮುನ್ನೆಚ್ಚರಿಕೆ ವಹಿಸಬೇಕೆಂದು ಸರ್ಕಾರ ಹೇಳಿದೆ.
ಕಾರ್ಮಿಕರು ಪ್ರತಿ 20 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು. ಪ್ರತಿ ಒಂದು ಗಂಟೆಗೊಮ್ಮೆ 5 ನಿಮಿಷ ವಿರಾಮ ಪಡೆಯಬೇಕು. ತಾತ್ಕಾಲಿಕ ಶೆಡ್ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಹೇಳಿದೆ.