ಶಿವಮೊಗ್ಗ: ವಕ್ಪ್ ಆಸ್ತಿ ವಿಚಾರದಲ್ಲಿ ಮುಸ್ಲಿಮರ ಧೋರಣೆಯಿಂದ ಮುಸ್ಲಿಂ ಸಮಾಜ ಅಧೋಗತಿಗೆ ಹೋಗಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕೇವಲ ರಾಜ್ಯ ಅಷ್ಟೇ ಅಲ್ಲದೇ ಇತರೆ ರಾಜ್ಯದಲ್ಲಿ ಇದು ಕಾಣಿಸುತ್ತಿದೆ. ಮುಸ್ಲಿಮರಿಗೆ ಕೇಡು ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ಹಿಂದು ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ. ಬಾಗಲಕೋಟೆ, ವಿಜಯಪುರ, ಬೀದರ್ ಗೆ ಬರುವಂತೆ ನನಗೆ ಸಾಧು ಸಂತರು ಆಹ್ವಾನಿಸಿದ್ದಾರೆ. ಸಾಧು ಸಂತರು ಜಾಗೃತರಾಗಿರೋದು ತುಂಬಾ ಸಂತೋಷ. ಸಾಧು ಸಂತರ ಆಹ್ವಾನದ ಮೇರೆಗೆ ಆಸ್ತಿ ಪರಿಶೀಲನೆಗೆ ಹೋಗುತ್ತಿದ್ದೇನೆ ಎಂದರು.
1 ಲಕ್ಷದ 10 ಸಾವಿರ ಎಕರೆ ವಕ್ಪ್ ಆಸ್ತಿ ಆಗಿದೆ ಅಂತಾ ಸಚಿವ ಜಮೀರ್ ಅಹ್ಮದ್ ವಿಧಾನಸೌಧದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಯಾವುದೇ ಕೋರ್ಟ್ ಗೆ ಜನ ಹೋಗುವ ಹಾಗೆ ಇಲ್ಲ. ಇದನ್ನು ದೇಶದ ಸಂವಿಧಾನ, ಕಾನೂನು ಒಪ್ಪುವ ಹಾಗೇ ಇಲ್ಲ. ಮುಸ್ಲಿಮರು ಇಲ್ಲದ ಕಡೆ ಶಾಲಾ ಆಸ್ತಿಯನ್ನು ವಕ್ಪ್ ಆಸ್ತಿ ಅಂತಿದ್ದಾರೆ. ವಕ್ಪ್ ಆಸ್ತಿ ಅಂತಾ ಇರುವ ಪಹಣಿಯನ್ನು ತಕ್ಷಣ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಾಧು ಸಂತರು ಮೊದಲ ಬಾರಿ ಹಿಂದುಗಳ ಆಸ್ತಿ ಉಳಿಸಬೇಕು ಅಂತಾ ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಗಳ ಬಗ್ಗೆ, ರೈತರ ಬಗ್ಗೆ, ಈ ನಾಡಿನ ಮಣ್ಣಿನ ಬಗ್ಗೆ ಗೌರವ ಇದ್ದರೆ ಮೊದಲು ಪಹಣಿ ರದ್ದು ಮಾಡಿ. ಜಮೀರ್ ಒಬ್ಬ ದೇಶದ್ರೋಹಿ. ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಜಮೀರ್ ತಿರುಚಿದ್ದಾರೆ. ಕೆ.ಎನ್.ರಾಜಣ್ಣನಂತಹ ಗಂಡು ಒಬ್ಬ ಸಚಿವ ಸಂಪುಟದಲ್ಲಿ ಇದ್ದಾರೆ. ಜಮೀರ್ ಅವರ ಹೇಳಿಕೆಯನ್ನು ರಾಜಣ್ಣ ಒಬ್ಬರೇ ವಿರೋಧಿಸಿದ್ದು. ಜಮೀರ್ ಬಾಲ ಹಿಡಿದುಕೊಂಡು ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತೀರಾ. ಸಾಧು ಸಂತರು, ದೇವರ ಶಾಪಕ್ಕೆ ಗುರಿ ಆಗ್ತೀರಾ ಎಂದು ಎಚ್ಚರಿಸಿದ್ದಾರೆ.
ಬೀರಲಿಂಗೇಶ್ವರ ದೇವರ ಆಸ್ತಿ ವಕ್ಪ್ ಆಸ್ತಿ ಅಂತಾ ಘೋಷಣೆ ಮಾಡಿದ್ದಾರೆ. ಬೀರಲಿಂಗೇಶ್ವರ ದೇವರು, ಕುರುಬರ ಶಾಪ ನಿಮಗೆ ತಟ್ಟುತ್ತದೆ. ಪಹಣಿಯನ್ನು ರದ್ದು ಮಾಡಿದರೆ ಮುಖ್ಯಮಂತ್ರಿ ಅವರಿಗೆ ರೈತರ ಬಗ್ಗೆ ಆಸಕ್ತಿ ಇದೆ ಅನಿಸುತ್ತದೆ. ಪಹಣಿ ರದ್ದು ಮಾಡದಿದ್ದರೆ, ಸಾಧು ಸಂತರ ಸಮಾಜ ಸುಮ್ಮನೆ ಕೂರುವುದಿಲ್ಲ. ರಾಜ್ಯದಲ್ಲಿ ಸಾಧು ಸಂತರ ನೇತೃತ್ವದಲ್ಲಿ ರಕ್ತ ಕ್ರಾಂತಿ ಆಗಲಿದೆ. ಪ್ರಧಾನಮಂತ್ರಿ ಅವರು ಈ ಬಗ್ಗೆ ಗಮನಿಸಿ ತಕ್ಷಣ ಪಾರ್ಲಿಮೆಂಟ್ ನಲ್ಲಿ ವಕ್ಪ್ ಬಿಲ್ ಪಾಸ್ ಮಾಡಬೇಕು ಎಂದಿದ್ದಾರೆ.
ವಕ್ಪ್ ಆಸ್ತಿ ಬಗ್ಗೆ ಬೊಮ್ಮಾಯಿ ಹೇಳಿಕೆಯ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿ, ಬೊಮ್ಮಾಯಿ ಏನು ಮೇಲಿಂದ ಇಳಿದು ಬಂದಿದ್ದಾನಾ?. ಮುಸ್ಲಿಮರ ಓಟು ಪಡೆಯಲು ಯಾರು ಯಾವಾಗ ಏನು ಬೇಕಾದರೂ ಹೇಳಿಕೆ ಕೊಡಬಹುದು. ಮುಸ್ಲಿಮರು ಹುಲಿ ಬಾಯಿಗೆ ಕೈ ಹಾಕಿದ್ದಾರೆ. ಕಡಕೊಳ ಗ್ರಾಮದಲ್ಲಿ ಮುಸ್ಲಿಮರ ಮನೆಗೆ ಕಲ್ಲು ಹೊಡೆದಿರೋದು ಇದೊಂದು ಆರಂಭ ಅಷ್ಟೇ ಎಂದರು.
ರಾಜ್ಯದಲ್ಲಿ ಗುಂಡಿ ಬಿದ್ದಿರುವ ರಸ್ತೆ ಮುಚ್ವಲು ಈ ಸರಕಾರದಲ್ಲಿ ಹಣ ಇಲ್ಲ. ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಅಗೌರವವಾಗಿ, ಹಗುರವಾಗಿ ಮಾತನಾಡಿದ್ದಾರೆ. ಇದು ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲ. ಮೋದಿ ಅವರ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಸಿದ್ದರಾಮಯ್ಯ ಮೋದಿ ಅವರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.