ಅಬುಧಾಬಿ: ಕೋವಿಡ್ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದು, ಬಯೋ ಸೆಕ್ಯೂರ್ ವಾತಾವರಣದಲ್ಲಿ ಬಿಸಿಸಿಐ ಪಂದ್ಯಗಳನ್ನು ನಡೆಸುತ್ತಿದೆ.
ಈ ವೇಳೆ ಕೊಹ್ಲಿ ತಂಡವನ್ನು ಹುರಿದುಂಬಿಸಲು ಅನುಷ್ಕಾ ಶರ್ಮಾ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಈ ವೇಳೆ ತುಂಬು ಗರ್ಭಿಣಿ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಪತಿ ಕೊಹ್ಲಿ ಸನ್ನೆ ಮಾಡಿ ಕಾಳಜಿ ತೋರಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪ್ರೇಕ್ಷರಕರ ವಿಶೇಷ ಗ್ಯಾಲರಿಯಲ್ಲಿ ನಿಂತಿದ್ದ ಪತ್ನಿ ಅನುಷ್ಕಾ ಶರ್ಮಾ ಅವರನ್ನು ನೋಡಿ ಕೊಹ್ಲಿ ಸನ್ನೆಯ ಮೂಲಕವೇ ಊಟ ಆಯ್ತಾ ಎಂದು ವಿಚಾರಿಸಿದ್ದಾರೆ.
ಸದ್ಯ ವಿರುಷ್ಕಾ ದಂಪತಿಯ ಮುದ್ದಾದ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ವಿ-ನೆಕ್ಲೈನ್ ಹೊಂದಿರುವ ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಪತಿಗೆ ಆಯ್ತು ಎಂದು ಉತ್ತರಿಸಿರುವುದನ್ನು ಕಾಣಬಹುದಾಗಿದೆ.
ಈ ಹಿಂದಿನ ಪಂದ್ಯದ ಸಂದರ್ಭದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಡದಿಗೆ ಫ್ಲೈಯಿಂಗ್ ಕಿಸ್ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರುಷ್ಕಾ ದಂಪತಿ ತಮಗೆ ಸಿಕ್ಕ ಸಮಯವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.