ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು; ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆ ದಿನ

ಕೇಂದ್ರ ವಿದ್ಯುತ್ ಇಲಾಖೆಯ (Central Electricity Department) ಅಡಿಯಲ್ಲಿ ಬರುವ ಸಟ್ಲೇಜ್ ಜಲ ವಿದ್ಯುತ್ ನಿಗಮ (Satluj Jal Vidyut Nigam-SJVN) ನಲ್ಲಿ ಹೊಸದಾಗಿ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ…

Electricity Department JOB

ಕೇಂದ್ರ ವಿದ್ಯುತ್ ಇಲಾಖೆಯ (Central Electricity Department) ಅಡಿಯಲ್ಲಿ ಬರುವ ಸಟ್ಲೇಜ್ ಜಲ ವಿದ್ಯುತ್ ನಿಗಮ (Satluj Jal Vidyut Nigam-SJVN) ನಲ್ಲಿ ಹೊಸದಾಗಿ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಫಿಲ್ಡ್ ಮ್ಯಾನೇಜರ್, ಫಿಲ್ಡ್ ಮ್ಯಾನೇಜರ್ ಸೇರಿದಂತೆ ಒಟ್ಟು 50 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು SJVN ಅಧಿಕೃತ ವೆಬ್ ಸೈಟ್ www.sjvn.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-04-2023 ಆಗಿದೆ.

ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ

Vijayaprabha Mobile App free

ಹುದ್ದೆಗಳ ಸಂಪೂರ್ಣ ವಿವರ :

ಇಲಾಖೆ : ಕೇಂದ್ರ ವಿದ್ಯುತ್ ಇಲಾಖೆಯ ಅಡಿಯಲ್ಲಿ ಬರುವ ಸಟ್ಲೇಜ್ ಜಲ ವಿದ್ಯುತ್ ನಿಗಮ (Satluj Jal Vidyut Nigam-SJVN)

ಹುದ್ದೆಗಳ ವಿವರ: ಫಿಲ್ಡ್ ಮ್ಯಾನೇಜರ್ (ಎಲೆಕ್ಟ್ರಿಕಲ್) – 12, ಫಿಲ್ಡ್ ಮ್ಯಾನೇಜರ್ (ಮೆಕ್ಯಾನಿಕಲ್) – 14, ಫಿಲ್ಡ್ ಮ್ಯಾನೇಜರ್ (ಸಿವಿಲ್) – 24

ಒಟ್ಟು ಹುದ್ದೆಗಳು : 50

ವೇತನ: ಹುದ್ದೆಗಳ ಅನುಗುಣವಾಗಿ ಪ್ರತಿ ತಿಂಗಳು ರೂ 80,000-1,18,000 ವೇತನದ ಜೊತೆಗೆ, ಗ್ರೇಡ್ ಪೇ, ಡಿಎ ಮತ್ತು ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಇದನ್ನು ಓದಿ: Jan Dhan Scheme: ಜನ್ ಧನ್ ಗ್ರಾಹಕರಿಗೆ 10 ಸಾವಿರ ರೂ,1.30 ಲಕ್ಷ ರೂ ಬೆನಿಫಿಟ್ಸ್!

ವಿದ್ಯಾರ್ಹತೆ: ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಸಿವಿಲ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗು ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 6 ವರ್ಷ ಅನುಭವ ಹೊಂದಿರಬೇಕು.

ಅರ್ಜಿ ಶುಲ್ಕ: ಫಿಲ್ಡ್ ಆಫೀಸರ್: ಸಾಮಾನ್ಯ ಅಭ್ಯರ್ಥಿಗಳು 500+GST ಪಾವತಿಸಬೇಕು (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ)

ಇದನ್ನು ಓದಿ: SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ

ಪ್ರಮುಖ ದಿನಾಂಕಗಳು:

* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-04-2023 ಆಗಿದೆ.

* ಅರ್ಜಿ ಪೋಸ್ಟ್ ಮೂಲಕ ಕಳುಹಿಸಿಕೊಡಲು ಕೊನೆಯ ದಿನಾಂಕ 19-05-2023 ಆಗಿದೆ.

ಹುದ್ದೆಗಳಿಗೆ ಹೆಚ್ಚಿನ ಮಾಹಿತಿಗಾಗಿ

ಇಲಾಖೆಯ ಅಧಿಕೃತ : https://sjvn.nic.in/current-jobs/94

ಅರ್ಜಿ ಸಲ್ಲಿಸಲು: https://cdn.digialm.com//EForms/configuredHtml/1258/80448/login.html

ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.