ಯುಪಿಐ ಪೇಮೆಂಟ್ ಇನ್ಮುಂದೆ ಇನ್ನಷ್ಟು ಸುಲಭ, ಸರಳ

UPI payment | ಭಾರತದ ಆನ್‌ಲೈನ್‌ ಪಾವತಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (ಯುಪಿಐ) ಈಗ ಬಯೋಮೆಟ್ರಿಕ್‌ ವಿಧಾನವನ್ನು ಅಳವಡಿಸಿಕೊಂಡಿದೆ. ಅಕ್ಟೋಬ‌ರ್ 8ರಿಂದ ಬಳಕೆದಾರರು ಪಿನ್ ನಮೂದಿಸುವ ಬದಲಿಗೆ ಫಿ೦ಗರ್‌ಪ್ರಿಂಟ್ ಅಥವಾ…

UPI payment

UPI payment | ಭಾರತದ ಆನ್‌ಲೈನ್‌ ಪಾವತಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (ಯುಪಿಐ) ಈಗ ಬಯೋಮೆಟ್ರಿಕ್‌ ವಿಧಾನವನ್ನು ಅಳವಡಿಸಿಕೊಂಡಿದೆ. ಅಕ್ಟೋಬ‌ರ್ 8ರಿಂದ ಬಳಕೆದಾರರು ಪಿನ್ ನಮೂದಿಸುವ ಬದಲಿಗೆ ಫಿ೦ಗರ್‌ಪ್ರಿಂಟ್ ಅಥವಾ ಫೇಸ್ ರೆಕಗ್ನಿಷನ್ ಮೂಲಕ ಪಾವತಿಯನ್ನು ಅನುಮೋದಿಸಬಹುದು. ಈ ಬದಲಾವಣೆ ಸುರಕ್ಷತೆ, ವೇಗ ಮತ್ತು ಸುಲಭತೆಯನ್ನು ಹೆಚ್ಚಿಸುತ್ತದೆ.

ಯುಪಿಐ ಲೈಟ್‌ನಿಂದ ಪಾವತಿ ಇನ್ನಷ್ಟು ಸುಲಭ

ಯುಪಿಐ ಲೈಟ್ ಬಳಸಿ ಸಣ್ಣ ಮೊತ್ತದ ಪಾವತಿಗೆ ಈಗ ಪಿನ್ ಅಗತ್ಯವಿಲ್ಲ. ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಇದರಿಂದ ಪ್ರಯೋಜನ ಪಡೆಯುತ್ತಾರೆ. ಇದು ಡಿಜಿಟಲ್ ಪಾವತಿಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮತ್ತಷ್ಟು ವಿಸ್ತರಿಸುವಲ್ಲಿ ಸಹಕಾರಿ.

ವಹಿವಾಟು ಮಿತಿಯಲ್ಲೂ ಬದಲಾವಣೆ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್‌ ಆಫ್ ಇಂಡಿಯಾ (NPCI) ಹೊಸ ನಿಯಮದಂತೆ ಷೇರು ಮಾರುಕಟ್ಟೆ, ವಿಮೆ, ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ ಸೇರಿದಂತೆ 12 ವರ್ಗಗಳ ವಹಿವಾಟಿನ ಗರಿಷ್ಠ ಮಿತಿಯನ್ನು 2 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಜೊತೆಗೆ 24 ಗಂಟೆಗಳಲ್ಲಿ ಒಟ್ಟು 10 ಲಕ್ಷ ರೂ.ವರೆಗೆ ವಹಿವಾಟು ಸಾಧ್ಯವಾಗಿದೆ. ಇದು ಹೂಡಿಕೆದಾರರು ಹಾಗೂ ವ್ಯಾಪಾರಿಗಳಿಗೆ ದೊಡ್ಡ ಸೌಲಭ್ಯ.

Vijayaprabha Mobile App free

ಬ್ಯಾಂಕ್‌ಗಳಿಗೆ ಸ್ವಾತಂತ್ರ್ಯ ಹಾಗೂ ನಿಯಂತ್ರಣ

ಎನ್‌ಪಿಸಿಐ ಗರಿಷ್ಠ ಮಿತಿಯನ್ನು ನಿಗದಿಪಡಿಸಿದರೂ, ಪ್ರತಿ ಬ್ಯಾಂಕ್ ತನ್ನ ಆಂತರಿಕ ನೀತಿಗೆ ಅನುಗುಣವಾಗಿ ಮಿತಿಗಳನ್ನು ಹೊಂದಿಸಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚು ಆಯ್ಕೆ ಮತ್ತು ಸುರಕ್ಷತೆ ದೊರಕುತ್ತದೆ. ಸರ್ಕಾರದ ತೆರಿಗೆ ಪಾವತಿಗಳಂತಹ ವಹಿವಾಟುಗಳಿಗೂ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಡಿಜಿಟಲ್ ಕ್ರಾಂತಿಯ ಮತ್ತೊಂದು ಹಂತ

ಯುಪಿಐ ಭಾರತದಲ್ಲೇ ನಿರ್ಮಿತವಾದ ತಂತ್ರಜ್ಞಾನವಾಗಿದ್ದು, ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಆ್ಯಪ್‌ಗಳ ಮೂಲಕ ಈಗ ಎಲ್ಲರೂ ಸುಲಭವಾಗಿ ವಹಿವಾಟು ನಡೆಸುತ್ತಿದ್ದಾರೆ. ಬಯೋಮೆಟ್ರಿಕ್‌ ಪಾವತಿ ಮತ್ತು ಹೆಚ್ಚಿದ ಮಿತಿಯೊ೦ದಿಗೆ, ಭಾರತ ಡಿಜಿಟಲ್ ಆರ್ಥಿಕತೆಯ ಹೊಸ ಅಧ್ಯಾಯವನ್ನು ಆರಂಭಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.