ಇಂದಿನಿಂದ ಅನಿಯಮಿತ ಮೆಟ್ರೊ ರೈಲು ಸಂಚಾರ; ಸ್ಮಾರ್ಟ್ ಕಾರ್ಡ್, ವೆಬ್ಸೈಟ್, ಆ್ಯಪ್ ಬಳಸಿ ರಿಚಾರ್ಜ್ ಮಾಡಿಕೊಳ್ಳಿ!

ಬೆಂಗಳೂರು: ನಗರದಲ್ಲಿ ಇಂದಿನಿಂದ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಅನಿಯಮಿತ ಮೆಟ್ರೊ ರೈಲು ಸೇವೆ ಇರಲಿದ್ದು, ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ಎಂದು…

ಬೆಂಗಳೂರು: ನಗರದಲ್ಲಿ ಇಂದಿನಿಂದ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಅನಿಯಮಿತ ಮೆಟ್ರೊ ರೈಲು ಸೇವೆ ಇರಲಿದ್ದು,

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ತಿಳಿಸಿದೆ.

ಇನ್ನು, ಜನದಟ್ಟಣೆಯ ಸಂದರ್ಭದಲ್ಲಿ ಪ್ರತಿ 5 ನಿಮಿಷ ಹಾಗೂ ಜನದಟ್ಟಣೆ ಇಲ್ಲದಾಗ 15 ನಿಮಿಷಗಳ ಅಂತರದಲ್ಲಿ (ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ) ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದೆ.

Vijayaprabha Mobile App free

ಮೆಟ್ರೊ ಸ್ಮಾರ್ಟ್ ಕಾರ್ಡ್ ವೆಬ್ಸೈಟ್, ಆ್ಯಪ್ ಬಳಸಿ ರಿಚಾರ್ಜ್:

ಇಂದಿನಿಂದ ಅನಿಯಮಿತ ಮೆಟ್ರೊ ರೈಲು ಸೇವೆ ಇರಲಿದ್ದು, ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಗಳನ್ನು ನಿಗಮದ ವೆಬ್ಸೈಟ್, ಆ್ಯಪ್ ಬಳಸಿ ರಿಚಾರ್ಜ್ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೆ, ಮೆಟ್ರೊ ನಿಲ್ದಾಣಗಳಲ್ಲಿನ ಕೌಂಟರ್ ಗಳಲ್ಲಿಯೂ ಎಟಿಎಂ ಕಾರ್ಡ್ ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್ ಮಾಡಿಸಬಹದಾಗಿದ್ದು, ಟೋಕನ್ ಗಳನ್ನು ನಗದು ನೀಡಿ ಅಥವಾ ಸ್ಟಾಟಿಕ್‌ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಖರೀದಿಸಬಹುದು ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.