ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಮಾರ್ಚ್ 31ರ ವೇಳೆಗೆ ನೋಂದಣಿ ಮಾಡಿಸಿದ್ದಲ್ಲಿ ರೈತರಿಗೆ ಲಾಭ ಸಿಗಲಿದೆ. ಹೌದು ಮಾರ್ಚ್ 31 ರೊಳಗೆ ಅರ್ಜಿ ಸಲ್ಲಿಸಿ ಅರ್ಜಿ ಸ್ವೀಕರಿಸಿದಲ್ಲಿ ಮಾರ್ಚ್ ತಿಂಗಳಿಗೆ ₹2000 ಏಪ್ರಿಲ್‌ನಲ್ಲಿ ₹2000ದಂತೆ ಒಟ್ಟು ₹4000 ಕೇಂದ್ರ ಸರ್ಕಾರ ದೇಶದ ರೈತರಿಗೆ ಹಣ ವರ್ಗಾವಣೆ ಮಾಡಲಿದೆ.
ಕೇಂದ್ರ ಸರ್ಕಾರ ಈವರೆಗೆ 7 ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದು, ಕಂತುಗಳು ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗುತ್ತದೆ. ಪ್ರತಿ ಹಣಕಾಸು ವರ್ಷದ ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31ಕ್ಕೆ ಬಿಡುಗಡೆಯಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ನೋಂದಣಿ ಹೇಗೆ?
☀ ವೆಬ್‌ಸೈಟ್ https://pmkisan.gov.in/ ಗೆ ಹೋಗಿ.
☀ ಫಾರ್ಮರ್ಸ್ ಕಾರ್ನರ್ ನಲ್ಲಿರುವ ‘ಹೊಸ ರೈತ ನೋಂದಣಿ’ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
☀ ಆಧಾರ್ ಸಂಖ್ಯೆ ನಮೂದಿಸಿ. ಜೊತೆಗೆ ಕ್ಯಾಪ್ಚಾ ಕೋಡ್ ಹಾಕಿ, ರಾಜ್ಯವನ್ನು ಆಯ್ಕೆ ಮಾಡಿ. ಮುನ್ನಡೆಯಿರಿ..
☀ ನಂತರ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ.
☀ ಬ್ಯಾಂಕ್ ಖಾತೆ ವಿವರ & ಕೃಷಿ ಸಂಬಂಧಿತ ಮಾಹಿತಿ ಭರ್ತಿ ಮಾಡಿ.
☀ಈಗ ನೀವು ಫಾರ್ಮ್ ಅನ್ನು ಸಲ್ಲಿಸಲು ಅರ್ಹರಾಗಿರುತ್ತೀರಿ.