ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗುತ್ತಿದ್ದು, ಇನ್ನೂ 2 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್ ಪ್ರಕಾಶ್ ಅವರು ತಿಳಿಸಿದ್ದಾರೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, ಏಪ್ರಿಲ್ 24ರ ವರೆಗೂ ಮಳೆ ಮುಂದುವರಿಯುವ ಮುನ್ಸೂಚನೆಗಳಿವೆ ಎಂದು ಹೇಳಲಾಗಿದೆ.
ಇನ್ನು, ರಾಜ್ಯದ ಬೆಂಗಳೂರು, ಮೈಸೂರು, ಹಾಸನ ಮತ್ತು ಮಡಿಕೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಉಷ್ಣಾಂಶ:
ಬೆಂಗಳೂರು: ಉಷ್ಣಾಂಶ/ ಗರಿಷ್ಠ 34°/ಕನಿಷ್ಠ 21°. ಮೈಸೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 21°. ಮಂಗಳೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 24°. ಕಲಬುರ್ಗಿ: ಉಷ್ಣಾಂಶ/ ಗರಿಷ್ಠ 39°/ ಕನಿಷ್ಠ 25°. ರಾಯಚೂರು: ಉಷ್ಣಾಂಶ/ ಗರಿಷ್ಠ 41°/ಕನಿಷ್ಠ 27°. ಧಾರವಾಡ: ಉಷ್ಣಾಂಶ/ ಗರಿಷ್ಠ 35°/ಕನಿಷ್ಠ 20°. ಮಡಿಕೇರಿ: ಉಷ್ಣಾಂಶ/ ಗರಿಷ್ಠ 30°/ಕನಿಷ್ಠ 21° ಇರಲಿದೆ.