ರಾಜ್ಯದಲ್ಲಿ ಮಳೆ ಅಬ್ಬರ ಮತ್ತೆ ಶುರುವಾಗಿದ್ದು, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ಹವಾಮಾನದಲ್ಲಿ ಬದಲಾವಣೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾಗಾಗಿ ಬೆಂಗಳೂರು ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಯಾದಗಿರಿ, ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಕರಾವಳಿ ಹಾಗೂ ಮಲೆನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದೇಶದ ಹಲವಾರು ರಾಜ್ಯಗಳಲ್ಲೂ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 28-19, ಮಂಗಳೂರು: 29-24, ಶಿವಮೊಗ್ಗ: 31-21, ಬೆಳಗಾವಿ: 29-19, ಮೈಸೂರು: 31-19, ಮಂಡ್ಯ: 32-20, ಮಡಿಕೇರಿ: 26-16, ರಾಮನಗರ: 31-20, ಹಾಸನ: 29-18, ಚಾಮರಾಜನಗರ: 31-19, ಚಿಕ್ಕಬಳ್ಳಾಪುರ: 27-18, ಕೋಲಾರ: 29-21, ಚಿತ್ರದುರ್ಗ: 29-20, ಹಾವೇರಿ: 31-21, ಬಳ್ಳಾರಿ: 31-23, ಗದಗ: 31-21, ಕೊಪ್ಪಳ: 31-22, ರಾಯಚೂರು: 30-23 ಡಿಗ್ರಿ ಸೆಲ್ಸಿಯಸ್ ಇರಲಿದೆ.