ಉತ್ತರ ಪ್ರದೇಶ: ಬರ್ಸಾನಾದಲ್ಲಿ ಲತ್ಮಾರ್ ಹೋಳಿ ಆಚರಣೆಯ ಸಂದರ್ಭದಲ್ಲಿ ಮಹಿಳಾ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಅವರ ಮೇಲೆ ಬಲವಂತವಾಗಿ ಬಣ್ಣ ಎಸೆದ ಇಬ್ಬರು ಯುವಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ರಾಜಸ್ಥಾನದ ಭರತ್ಪುರದ ಕಾಮಾ ಪ್ರದೇಶದ ದಿಲಾವತಿ ಗ್ರಾಮದ ನಿವಾಸಿಗಳಾದ ಪುಷ್ಪೇಂದ್ರ ಕುಮಾರ್ ಮತ್ತು ಅನಿಲ್ ಅವರು ಶ್ರೀಜಿ ಗೇಟ್ ಬಳಿ ಮಹಿಳೆಯರ ಮೇಲೆ ಬಲವಂತವಾಗಿ ಬಣ್ಣ ಎಸೆಯುತ್ತಿದ್ದರು ಎಂದು ದೂರು ಬಂದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಅರವಿಂದ್ ಕುಮಾರ್ ನಿರ್ವಾಲ್ ತಿಳಿಸಿದ್ದಾರೆ.
ಅಂಗಡಿಯವರು ಮತ್ತು ಸ್ಥಳೀಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ವಾಗ್ವಾದಕ್ಕೆ ಇಳಿದರು ಎಂದು ಅವರು ಹೇಳಿದರು. ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.