ಬೆಂಗಳೂರು: ಸುದೀರ್ಘ ಗ್ಯಾಪ್ ನಂತರ ನಟ ದರ್ಶನ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ‘ಡೆವಿಲ್’ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ.
‘ಡೆವಿಲ್’ ಚಿತ್ರದ ಶೂಟಿಂಗ್ ಮತ್ತೆ ಆರಂಭವಾಗಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ‘ದಾಸ’ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಸರ್ಕಾರಿ ಅತಿಥಿ ಗೃಹ ಹಾಗೂ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಚಿತ್ರೀಕರಣ ನಡೆಯಲಿದೆ.
ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತ್ತು ಮಾರ್ಚ್ 15 ರಂದು ಲಲಿತ್ ಮಹಲ್ ಪ್ಯಾಲೇಸ್ನಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಡಿಸಿಪಿ ಮುತ್ತುರಾಜ್ ಅವರು ಶೂಟಿಂಗ್ ಭದ್ರತೆಗಾಗಿ ಒಟ್ಟು 32 ಪೊಲೀಸ್ ಸಿಬ್ಬಂದಿಯನ್ನು, ಒಂದು ಶಿಫ್ಟ್ನಲ್ಲಿ 10 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ನಟನ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಡೆವಿಲ್ ಚಿತ್ರತಂಡ ಈಗಾಗಲೇ 1,64,785 ರೂ. ಪಾವತಿಸಿದೆ.
ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಮಹೇಶ್ ಮಾಂಜ್ರೇಕರ್, ಜಿಶು ಸೆಂಗುಪ್ತ, ಮುಖೇಶ್ ರಿಷಿ, ಫರ್ದೀನ್ ಖಾನ್ ಮುಂತಾದ ಕಲಾವಿದರು ಇದ್ದಾರೆ.
ಈ ಮಧ್ಯೆ, ‘ಡೆವಿಲ್’ ಚಿತ್ರದ ಶೂಟಿಂಗ್ ನಲ್ಲಿ ಸ್ಟಾರ್ ನಟಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ‘ಡೆವಿಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಶರ್ಮಿಳಾ ಸ್ವತಃ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ತನ್ನ ಕಾರವ್ಯಾನ್‌ನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಲ್ಲದೆ, ಅವರು ‘ಡೆವಿಲ್’ ಚಿತ್ರದಲ್ಲಿ ನಟಿಸುವ ಬಗ್ಗೆ ವಿವಿಧ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ದರ್ಶನ್ ಅಭಿನಯದ ‘ನವಗ್ರಹ’ ಸಿನಿಮಾದಲ್ಲಿ ಶರ್ಮಿಳಾ ನಟಿಸಿದ್ದರು. ಇದೀಗ ‘ಡೆವಿಲ್’ಚಿತ್ರದಲ್ಲಿ ಶರ್ಮಿಳಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿದೆ.