ನವದೆಹಲಿ: ಹಣಕಾಸು ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಟಿ.ವಿ.ಸೋಮನಾಥನ್ ಅವರನ್ನು ಮುಂದಿನ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಸೋಮನಾಥನ್ ಅವರು ಆಗಸ್ಟ್ 30ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ, ರಾಜೀವ್ ಗೌಬಾ ಅವರು ಸಂಪುಟ ಕಾರ್ಯದರ್ಶಿಯಾಗಿದ್ದಾರೆ. 1987ರ ಬ್ಯಾಚ್‌ನ ತಮಿಳು ನಾಡು ಕೇಡರ್‌ನ ಅಧಿಕಾರಿಯಾಗಿ ರುವ ಸೋಮನಾಥನ್, ಸದ್ಯ ಕೇಂದ್ರ ಹಣಕಾಸು ಮತ್ತು ವೆಚ್ಚಗಳ ಕಾರ್ಯ ದರ್ಶಿಯಾಗಿದ್ದಾರೆ. ಸಂಪುಟದ ನೇಮಕಾತಿ ಸಮಿತಿಯು, ಸೋಮನಾಥನರನ್ನು ಆ.30ರಿಂದ 2 ವರ್ಷದ ಅವಧಿಗೆ ನೇಮಕ ಮಾಡಿದೆ. ಹಾಲಿ ಸಂಪುಟ ಕಾರ್ಯದರ್ಶಿ 2019ರ ಆಗಷ್ಟ್ 30ರಂದು ಅಧಿಕಾರ ಸ್ವೀಕರಿಸಿದ್ದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment