Accident : ಕಾರಿನ ಮೇಲೆ ಲಾರಿ ಕಂಟೈನರ್ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ NH-4ರಲ್ಲಿ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರು ದಾರುಣ ಅಂತ್ಯಕಂಡಿದ್ದಾರೆ. ಏಕಾಏಕಿ ಲಾರಿ ಕಾರಿನ ಮೇಲೆ ಬಿದ್ದಿದ್ದರಿಂದ ಕಾರು ಅಪ್ಪಚ್ಚಿಯಾಗಿದ್ದು, ಕಾರಿನೊಳಗಿದ್ದ ಎರಡು ಮಕ್ಕಳು ಸೇರಿ ಆರು ಜನರು ಸಹ ಮೃತಪಟ್ಟಿದ್ದಾರೆ.
ಇದನ್ನೂ ಓದಿ: PF withdrawal | ಪಿಎಫ್ ಹಣ ವಿತ್ ಡ್ರಾ ಮಾಡಬೇಕಾ..? ಇನ್ಮೇಲೆ ನೀವೇ ಸುಲಭವಾಗಿ ಸ್ವತಃ ಅಪ್ರುವಲ್ ಮಾಡಿಕೊಳ್ಳಬಹುದು..!
ಅಪಘಾತ ಹಿನ್ನೆಲೆ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹರಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು ಎನ್ನಲಾಗಿದೆ.
Accident : ಕ್ಷಣಾರ್ಧದಲ್ಲೇ ಒಂದೇ ಕುಟುಂಬದ 6 ಮುಗ್ಧ ಜೀವಗಳು ಬಲಿ
ಬೆಂಗಳೂರಿನ ನೆಲಮಂಗಲ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮುಗ್ಧ ಜೀವಗಳು ಬಲಿಯಾಗಿವೆ. ಘಟನೆಯ ದೃಶ್ಯಾವಳಿ ನೋಡಿದ್ರೆ ಎದೆ ಝಲ್ ಅನ್ನುತ್ತದೆ.
ಮೃತಪಟ್ಟವರೆಲ್ಲರೂ ಒಂದೇ ಕುಟುಂಬದವರು. ಇವರಲ್ಲಿ ಇಬ್ಬರು ಪುರುಷರು, ಇಬ್ಬರು ಹೆಂಗಸರು & ಇಬ್ಬರು ಮಕ್ಕಳು. ನಾಲ್ವರು ಗುರುತು ಪತ್ತೆಯಾಗಿದ್ದು, ವಿಜಯಪುರದ ಸಾಫ್ಟ್‌ವೇರ್ ಇಂಜಿನಿಯರ್ ಚಂದ್ರಮ್, ಗೌರಾಬಾಯಿ, ಮಕ್ಕಳಾದ ದೀಕ್ಷಾ & ಧ್ಯಾನ್ ಮೃತರು. ಬೃಹತ್ ಗಾತ್ರದ ಕಂಟೇನರ್ ಆಗಿದ್ದರಿಂದ ಎಲ್ಲರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ಇ-ಶ್ರಮ್ ಕಾರ್ಡ್ ಇದ್ರೆ ಪ್ರತಿ ತಿಂಗಳು ಸಿಗಲಿದೆ 3000..!