ಮೈಸೂರು: ರಾಜ್ಯಾದ್ಯಂತ ರಣ ಭೀಕರ ಮಳೆ ಆರ್ಭಟ ಜೋರಾಗಿದ್ದು, ಈ ಮಧ್ಯೆ ಬೆಂಗಳೂರು-ಮೈಸೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿದ್ದು, ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಹಿತಿ ನೀಡಿದೆ.
ಬೆಂಗಳೂರಿನಿಂದ ಮೈಸೂರಿಗೆ ಬರುವ ಮೆಮು ರೈಲ್ವೇ ಸಂಖ್ಯೆ 06255ಅನ್ನು ಸಂಪೂರ್ಣ ರದ್ದು ಮಾಡಲಾಗಿದ್ದು, ರಾಮನಗರ-ಚಾಮರಾಜನಗರ ಪ್ಯಾಸೇಂಜರ್ ರೈಲು ಕೂಡಾ ರದ್ದಾಗಿದೆ ಎಂದು ಮೈಸೂರು ರೈಲ್ವೇ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.