ರಾಜ್ಯದ ವಿವಿಧೆಡೆ ಐದು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಮುಂದುವರೆಯಲಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಗೂ ಕೊಡಗು ಜಿಲ್ಲೆಗೆ ಮುಂದಿನ 3 ದಿನಗಳು ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಶುಕ್ರವಾರ ಬೆಳಗಿನವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗಲಿದೆ.
ಇನ್ನು, ಬೆಳಗಾವಿ, ಮೈಸೂರು, ತುಮಕೂರು, ಶಿವಮೊಗ್ಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಬೀದರ್, ಕಲಬುರ್ಗಿ ಸೇರಿ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ವಿವಿಧ ಜಿಲ್ಲೆಗಳ ತಾಪಮಾನ:
ಬೆಂಗಳೂರು: 25-19
ದಾವಣಗೆರೆ: 27-22
ಚಿತ್ರದುರ್ಗ: 26-21
ಹಾವೇರಿ: 27-22
ಬಳ್ಳಾರಿ: 29-23
ಗದಗ: 27-21
ಕೊಪ್ಪಳ: 28-22
ಮಂಗಳೂರು: 27-24
ಶಿವಮೊಗ್ಗ: 26-21
ಬೆಳಗಾವಿ: 26-21
ಮೈಸೂರು: 24-20
ಮಂಡ್ಯ: 25-21
ಕೊಡಗು: 21-17
ರಾಮನಗರ:26-21
ಹಾಸನ: 24-19
ಚಾಮರಾಜನಗರ: 24-21
ಚಿಕ್ಕಬಳ್ಳಾಪುರ: 26-20
ಕೋಲಾರ: 26-21
ತುಮಕೂರು: 26-20
ಉಡುಪಿ: 27-21
ಕಾರವಾರ: 28-24
ಚಿಕ್ಕಮಗಳೂರು: 23-18
ರಾಯಚೂರು: 30-23
ಯಾದಗಿರಿ: 30-23
ವಿಜಯಪುರ: 27-22
ಬೀದರ್: 27-22
ಕಲಬುರಗಿ: 29-23
ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.