ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಪಂದ್ಯ; ಗೆಲುವು ಯಾರಿಗೆ…?

ಅಬುದಾಬಿ: ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಅಬುದಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ತಾವು ಆಡಿದ ಮೊದಲ ಪಂದ್ಯಗಳಲ್ಲಿ ಸೋತಿದ್ದು, ಇದರೊಂದಿಗೆ ಎರಡು…

SRH vs KKR

ಅಬುದಾಬಿ: ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಅಬುದಾಬಿಯ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ತಾವು ಆಡಿದ ಮೊದಲ ಪಂದ್ಯಗಳಲ್ಲಿ ಸೋತಿದ್ದು, ಇದರೊಂದಿಗೆ ಎರಡು ತಂಡಗಳು ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಕಣಕ್ಕಿಳಿಯಲು ಸಜ್ಜಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ಸೋಲನ್ನು ಅನುಭವಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮನೀಶ್ ಪಾಂಡೆ ಮತ್ತು ಜಾನಿ ಬೈರ್‌ಸ್ಟೋವ್ ಅವರ ವಿಕೆಟ್ ಪಡೆಯುವ ಮೂಲಕ ಚಹಲ್ ಅವರು ಪಂದ್ಯದ ಗತಿಯನ್ನು ಬದಲಾಯಿಸಿದ್ದರಿಂದ ಸನ್ ರೈಸರ್ಸ್ ಹೈದರಾಬಾದ್ ಸೋಲನ್ನು ಕಂಡಿತ್ತು. ಮಿಚೆಲ್ ಮಾರ್ಷ್ ಮೊದಲ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದು, ಇವರ ಬದಲಿಯಾಗಿ ಸನ್‌ರೈಸರ್ಸ್ ಜೇಸನ್ ಹೋಲ್ಡರ್ ಹೆಸರನ್ನು ಆಯ್ಕೆಮಾಡಿಕೊಂಡಿದೆ. ಸದ್ಯ ಮಾರ್ಷ್ ಬದಲಿಗೆ ಮೂವರು ವಿದೇಶಿ ಆಟಗಾರರು ಸನ್‌ರೈಸರ್ಸ್‌ಗೆ ಫ್ಯಾಬಿಯನ್ ಅಲೆನ್ಸ್, ಕೇನ್ ವಿಲಿಯಮ್ಸನ್ ಮತ್ತು ಮೊಹಮ್ಮದ್ ನಬಿ ರೂಪದಲ್ಲಿ ಲಭ್ಯರಿದ್ದಾರೆ.

ಕೇನ್ ವಿಲಿಯಮ್ಸನ್ ಫಿಟ್ನೆಸ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಮಿಚೆಲ್ ಮಾರ್ಷ್ ಬದಲಿಗೆ ಅಫಘಾನಿಸ್ತಾನದ ಮಹಮ್ಮದ್ ನಬಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಯುಎಇಯಲ್ಲಿ ಅನೇಕ ಪಂದ್ಯಗಳನ್ನು ಆಡಿದ ಅನುಭವ ಮಹಮ್ಮದ್ ನಬಿ ಅವರಿಗೆ ಇದೆ. ಈ ಒಂದು ಬದಲಾವಣೆಯನ್ನು ಹೊರತುಪಡಿಸಿ, ಸನ್‌ರೈಸರ್ಸ್‌ ಮೊದಲ ಪಂದ್ಯವನ್ನು ಆಡಿದ ಅದೇ ಆಟಗಾರರೊಂದಿಗೆ ಎರಡನೇ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ.

Vijayaprabha Mobile App free

ಮತ್ತೊಂದೆಡೆ ಕೋಲ್ಕತಾ ತಂಡ ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ನಾಯಕ ದಿನೇಶ್ ಕಾರ್ತಿಕ್‌, ನಿತೀಶ್ ರಾಣಾ, ಪಾಟ್ ಕಮಿನ್ಸ್ ಹೊರತು ಪಡಿಸಿದರೆ ಉಳಿದ ಆಟಗಾರರು ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದರು. ಆದರೆ ಕೋಲ್ಕತಾ ತಂಡ ಸಮತೋಲನದಿಂದ ಕೂಡಿದ್ದು, ಸುನಿಲ್ ನರೈನ್, ಇಯಾನ್ ಮೋರ್ಗಾನ್ ಮತ್ತು ಆಂಡ್ರೆ ರಸ್ಸೆಲ್‌ರಂತಹ ಬಿಗ್ ಹಿಟ್ಟರ್ ಗಳನ್ನೂ ಹೊಂದಿದ್ದು, ಬೌಲಿಂಗ್ ವಿಭಾಗದಲ್ಲಿ ಆಸೀಸ್ ನ ಸ್ಟಾರ್ ವೇಗಿ ಪ್ಯಾಟ್ ಕಮ್ಮಿನ್ಸ್,ಶಿವಂ ಮಾವಿ,ಕುಲದೀಪ್ ಯಾದವ್ ಅವರಂತಹ ಬೌಲರ್ ಗಳು ತಂದಲ್ಲಿದ್ದಾರೆ.

ಇದನ್ನು ಓದಿ: ಪೃಥ್ವಿ ಷಾ ಅಮೋಘ ಪ್ರದರ್ಶನ; ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಭರ್ಜರಿ ಗೆಲುವು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.