ವಿಶ್ವದ ಒಟ್ಟು ಜನಸಂಖ್ಯೆ ಇಂದಿಗೆ ( ನವೆಂಬರ್ 15) 800 ಕೋಟಿ ತಲುಪಲಿದೆ. ಇಂದು ವಿಶ್ವದ ಜನಸಂಖ್ಯೆಯು 800 ಕೋಟಿ ತಲುಪಲಿದೆ ಮತ್ತು ಮುಂದಿನ ವರ್ಷ ಚೀನಾವನ್ನು ಹಿಂದಿಕ್ಕಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಹೌದು, ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾದ ವರದಿಯಲ್ಲಿ, 1950 ರಿಂದ ಮೊದಲ ಬಾರಿಗೆ 2020 ರಲ್ಲಿ ಜಾಗತಿಕ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವ ಸಂಸ್ಥೆಯ ವರದಿ ಪ್ರಕಾರ, 2030 ರಲ್ಲಿ ವಿಶ್ವದ ಜನಸಂಖ್ಯೆಯು ಸುಮಾರು 850 ಕೋಟಿಗೆ ಬೆಳೆಯಬಹುದು. ಆ ಸಂಖ್ಯೆಯು 2050 ರಲ್ಲಿ 970 ಕೋಟಿಗೆ ಜಿಗಿಯಲಿದೆ ಮತ್ತು 2080 ರ ದಶಕದಲ್ಲಿ ಸುಮಾರು 1,040 ಕೋಟಿಗೆ ಏರುತ್ತದೆ. 2100 ರವರೆಗೆ ಆ ಮಟ್ಟದಲ್ಲಿ ಉಳಿಯುವ ಮುನ್ಸೂಚನೆ ಇದೆ.