ಇಂದು ಮಹರ್ಷಿ ವಾಲ್ಮೀಕಿ ಜಯಂತಿ; ಶುಭ ಕೋರಿದ ಗಣ್ಯರು

ಬೆಂಗಳೂರು: ಇಂದು ಪವಿತ್ರ ಮತ್ತು ಸಾಹಿತ್ಯ ಮಾಲೆಯಲ್ಲಿ ಶ್ರೇಷ್ಟ ಸ್ಥಾನ ಪಡೆದ ಮಹಾನ್ ಗ್ರಂಥ ರಾಮಾಯಣವನ್ನು ರಚಿಸಿ ಶ್ರೀರಾಮನ ಸರ್ವಶ್ರೇಷ್ಟತೆಯನ್ನು, ಯುಗಯುಗಗಳ ಇತಿಹಾಸವನ್ನು, ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ ಮಹರ್ಷಿ ಆದಿಕವಿ ವಾಲ್ಮೀಕಿ ಜಯಂತಿ. ಮಹರ್ಷಿ…

ಬೆಂಗಳೂರು: ಇಂದು ಪವಿತ್ರ ಮತ್ತು ಸಾಹಿತ್ಯ ಮಾಲೆಯಲ್ಲಿ ಶ್ರೇಷ್ಟ ಸ್ಥಾನ ಪಡೆದ ಮಹಾನ್ ಗ್ರಂಥ ರಾಮಾಯಣವನ್ನು ರಚಿಸಿ ಶ್ರೀರಾಮನ ಸರ್ವಶ್ರೇಷ್ಟತೆಯನ್ನು, ಯುಗಯುಗಗಳ ಇತಿಹಾಸವನ್ನು, ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ ಮಹರ್ಷಿ ಆದಿಕವಿ ವಾಲ್ಮೀಕಿ ಜಯಂತಿ.

ಮಹರ್ಷಿ ಆದಿಕವಿ ವಾಲ್ಮೀಕಿ ಜಯಂತಿಯಾದ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ನಟ ಕಿಚ್ಚ ಸುದೀಪ್, ಶ್ರೀರಾಮುಲು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ , ಲಕ್ಷಣ್ ಸವದಿ, ಅಶ್ವಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

ನಾಡಬಂಧುಗಳಿಗೆ ವಾಲ್ಮೀಕಿ ಜಯಂತಿಗೆ ಶುಭ ಕೋರಿದ ಸಿದ್ದರಾಮಯ್ಯ 

Vijayaprabha Mobile App free

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಹುಟ್ಟು ಆಕಸ್ಮಿಕ, ಸಾಧನೆ ಶಾಶ್ವತ ಎಂಬ ಬದುಕಿನ ಬಹುದೊಡ್ಡ ಪಾಠವನ್ನು ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ತೋರಿಸಿಕೊಟ್ಟವರು ಮಹಾಗುರು ಮಹರ್ಷಿ ವಾಲ್ಮೀಕಿ. ನಮ್ಮೆಲ್ಲರ ಬದುಕಿಗೆ ವಾಲ್ಮೀಕಿ ಮಹರ್ಷಿಯ ಸಾಧನೆ ಸ್ಪೂರ್ತಿಯಾಗಲಿ ಎಂದು ಹೇಳಿದ್ದು ನಾಡಬಂಧುಗಳಿಗೆ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಕೋರಿದ ಯಡಿಯೂರಪ್ಪ 

ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯ ತಿಳಿಸಿದ್ದು, ಆದಿಕಾವ್ಯ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹರ್ಷಿ ವಾಲ್ಮೀಕಿಗಳಿಗೆ ಅನಂತ ಪ್ರಣಾಮಗಳು. ಭಾರತೀಯ ಜನಮಾನಸದ ಮೇಲೆ ಶಾಶ್ವತ ಪ್ರಭಾವ ಬೀರಿರುವ ಮಹಾಕವಿ ವಾಲ್ಮೀಕಿಗಳನ್ನು ಪಡೆದ ಈ ನಾಡು ಧನ್ಯ ಎಂದು ಹೇಳಿದ್ದಾರೆ.

ವಾಲ್ಮೀಕಿ ಜಯಂತಿಗೆ ಶುಭ ಕೋರಿದ ಶ್ರೀರಾಮುಲು

ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ, ಸಾಹಿತ್ಯ ಇತಿಹಾಸದ ಅತ್ಯುನ್ನತ ಕೃತಿ ರಾಮಾಯಣದ ಕರ್ತೃ, ಆದಿ‌ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಶತಕೋಟಿ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದ್ದು, ರಾಮಾಯಣದ ಮೂಲಕ‌ ಜೀವನ ಮೌಲ್ಯ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕ ಋಷಿಕವಿ ಮಹರ್ಷಿ ವಾಲ್ಮೀಕಿಗೆ ಅನಂತ ಪ್ರಣಾಮಗಳು ಎಂದು ಹೇಳಿದ್ದಾರೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.