ತುಮಕೂರು: ನವಂಬರ್ 3 ರಂದು ಶಿರಾ ಕ್ಷೇತ್ರದ ಬಾಯಿ ಎಲೆಕ್ಷನ್ ಹಿನ್ನಲೆ ತುಮಕೂರು ಜಿಲ್ಲೆ ಶಿರಾದಲ್ಲಿ ಕೈ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿದ್ದು, ಹಿಂದೆ ಶಿರಾಗೇ ಹೆಣ್ಣು ಮಕ್ಕಳನ್ನು ಕೊಡಲು ಹೆದರುತ್ತಿದ್ದರು ಶಿರಾದಲ್ಲಿ ಕುಡಿಯುವ ನೀರಿಲ್ಲ ಎಂದು ಭಯ ಪಡುತ್ತಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
151 ಬ್ಯಾರೇಜ್ ಕಟ್ಟಿಸಿ ಟಿ.ಬಿ ಜಯಚಂದ್ರ ನೀರು ತಂದಿದ್ದಾರೆ.ಶಿರಾ ಕ್ಷೇತ್ರದಲ್ಲಿ ಜಯಚಂದ್ರ ಅವರಂತಹ ಮುತ್ಸದ್ದಿಯ ಅಗತ್ಯವಿದೆ.ಶಿರಾದಲ್ಲಿ ಸಾರ್ವಜನಿಕವಾಗಿ ಹಣ, ಹೆಂಡ ಹಂಚಲಾಗುತ್ತಿದೆ. ಆದ್ರೂ ಚುನಾವಣಾ ಆಯೋಗ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ
ಬಿಜೆಪಿ ಅವಧಿಯಲ್ಲಿ ತುಮಕೂರು ಜಿಲ್ಲೆಗೆ ಏನು ಮಾಡಿದ್ದಾರೆ ? ಎಂದು ಶಿರಾ ಪಟ್ಟಣದಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಪ್ರಶ್ನಿಸಿದ್ದು, ಹೇಮಾವತಿ ನದಿ ನೀರು ತುಮಕೂರಿಗೆ ಹರಿಸಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ಚಿಂತನೆ ನಡೆದಿತ್ತು. ಕಾಲುವೆ ಮಾಡುವಾಗಲೂ ಕಾಂಗ್ರೆಸ್ ಸರ್ಕಾರವೇ ಇತ್ತು.
ತುಮಕೂರು ವಿಶ್ವವಿದ್ಯಾಲಯ ನೀಡಿದ್ದು ಕಾಂಗ್ರೆಸ್ ಪಕ್ಷ. ಇಂಡಸ್ಟ್ರಿಯಲ್ ಹಬ್ ಮಾಡಿದ್ದೂ ಕಾಂಗ್ರೆಸ್ ಅವಧಿಯಲ್ಲಿ, ಹೆಲಿಕಾಫ್ಟರ್ ಫ್ಯಾಕ್ಟಾರಿ ತೆರೆಯಲು ಚಿಂತನೆ ಮಾಡಲಾಗಿತ್ತು ಎಂದು ಶಿರಾದಲ್ಲಿ ಮಾಜಿ ಡಿಸಿಎಂ ಜೆ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಇಂದು ಮಹರ್ಷಿ ವಾಲ್ಮೀಕಿ ಜಯಂತಿ; ಶುಭ ಕೋರಿದ ಗಣ್ಯರು