ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಫಲಾನುಭವಿ ರೈತರು ಇಂದು EKYC ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನ (ಫೆಬ್ರವರಿ 10) ವಾಗಿದ್ದು, ಸರ್ಕಾರ ಈಗಾಗಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಧಿ ವಿಸ್ತರಣೆ ಇಲ್ಲ ಎನ್ನಲಾಗಿದೆ.
ಹೌದು, ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಲಿಂಕ್ ಮಾಡದ ಫಲಾನುಭವಿಗಳು ಇಂದು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಂತಹ ಫಲಾನುಭವಿ ರೈತರ ಖಾತೆಗೆ ಈ ಯೋಜನೆಯ ಮುಂದಿನ ಹಣ ಸಿಗುವುದು ಸಂದೇಹ.
ಇದಕ್ಕಾಗಿ ಕಿಸಾನ್ ಸಮ್ಮಾನ್ ವೆಬ್‌ಸೈಟ್‌ಗೆ ಹೋಗಿ KYC ಅನ್ನು ಪೂರ್ಣಗೊಳಿಸಬಹುದಾಗಿದ್ದು, ಹತ್ತಿರದ ಸೇವಾ ಕೇಂದ್ರದಲ್ಲೂ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ಕೆವೈಸಿ ಮಾಡಲು ಬಯಸಿದರೆ, ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಿದೆ.