ಇಂದು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಜನ್ಮದಿನ; ಶ್ರೀರಾಮುಲು ಸೇರಿ ಗಣ್ಯರ ಶುಭಾಶಯ

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮಹೋನ್ನತ ದೊರೆ ಶ್ರೀಕೃಷ್ಣದೇವರಾಯರ 550 ನೇ ಜನ್ಮದಿನ. ಶ್ರೀಕೃಷ್ಣದೇವರಾಯರು ಸುಮಾರು 16ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು ಹಾಗು ಬಹುಮನಿ ಸುಲ್ತಾನರನ್ನು ಗೆದ್ದು, ಉತ್ತರದಲ್ಲಿದ್ದ ಮೊಘಲರ ಅಧಿಪತಿ ಬಾಬರನಿಗೆ ಮೊದಲಬಾರಿ…

shrikrushnadevaraya vijayaprabha

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮಹೋನ್ನತ ದೊರೆ ಶ್ರೀಕೃಷ್ಣದೇವರಾಯರ 550 ನೇ ಜನ್ಮದಿನ. ಶ್ರೀಕೃಷ್ಣದೇವರಾಯರು ಸುಮಾರು 16ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು ಹಾಗು ಬಹುಮನಿ ಸುಲ್ತಾನರನ್ನು ಗೆದ್ದು, ಉತ್ತರದಲ್ಲಿದ್ದ ಮೊಘಲರ ಅಧಿಪತಿ ಬಾಬರನಿಗೆ ಮೊದಲಬಾರಿ ನಡುಕ ಹುಟ್ಟಿಸುವಂತೆ ಮಾಡಿದ್ದರು.

ಶ್ರೀಕೃಷ್ಣದೇವರಾಯರು ಕನ್ನಡ ರಾಜ್ಯರಮಣ ಎಂಬ ಬಿರುದಿನೊಂದಿಗೆ ದಕ್ಷಿಣ ಭಾರತದ ಅತ್ಯಂತ ವೈಭವೋಪೇರಿತ ಸಾಮ್ರಾಜ್ಯವಾಗಿದ್ದ ವಿಜಯನಗರ ಆಡಳಿತವನ್ನು ದೇಶದಲ್ಲಿ ಮಾದರಿಯಾಗಿಸಿದ್ದ ಕೀರ್ತಿ ಇವರದ್ದು. ನಂತರ ವಿಜಯನಗರ ತುಳಿದ ಹೆಜ್ಜೆಗುರುತುಗಳೇ ಶಿವಾಜಿ ಮಹಾರಾಜಾ ಹಿಂದವೀ ಸ್ವರಾಜ್ಯಕ್ಕೆ ಪ್ರೇರಕ ಶಕ್ತಿಯಾಗಿತ್ತು. ಹಂಪಿಯ ಸುಪ್ರಸಿದ್ದ ಕಲ್ಲಿನ ರಥ ಹಾಗು ವಾಸ್ತುಶಿಲ್ಪ ಇವರು ನಮ್ಮ ನಾಡಿಗೆ ಕೊಟ್ಟ ಪ್ರಮುಖ ಕೊಡುಗೆಗಳಾಗಿವೆ.

ಶ್ರೀಕೃಷ್ಣದೇವರಾಯರ ಹುಟ್ಟುಹಬ್ಬಕ್ಕೆ ಶುಭಕೋರಿದ ಸಚಿವ ಶ್ರೀರಾಮುಲು:

Vijayaprabha Mobile App free

ವಿಜಯನಗರ ಸಾಮ್ರಾಜ್ಯವನ್ನು ಜಗತ್ಪ್ರಸಿದ್ಧಿಗೊಳಿಸಿದ, ಮೊಘಲರಿಂದಲೇ ದೇಶದ ಶ್ರೇಷ್ಠ ದೊರೆ ಎಂದು ಕರೆಸಿಕೊಂಡ, ಅದೆಷ್ಟೋ ಅರಸರನ್ನು ಬಗ್ಗುಬಡಿದು ರಾಜ್ಯ ವಿಸ್ತರಿಸಿದ, ರಸ್ತೆ ಬದಿ ಮುತ್ತು-ರತ್ನ ಮಾರುವಂತಹ ಸಂಪತ್ಭರಿತ ಸಾಮ್ರಾಜ್ಯ ಕಟ್ಟಿದ ಶ್ರೀಕೃಷ್ಣದೇವರಾಯರ ಜನ್ಮದಿನವಾದ ಇಂದು ಗೌರವ ನಮನ ಸಲ್ಲುತ್ತವೆ.

ಶ್ರೀಕೃಷ್ಣದೇವರಾಯರ ಜನ್ಮದಿನವಾದ ಇಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಶುಭಾಶಯ:

ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ, ಕನ್ನಡರಾಜ್ಯ ರಮಾರಮಣ ಶ್ರೀ ಕೃಷ್ಣ ದೇವರಾಯ ಅವರ ಜನ್ಮದಿನೋತ್ಸವದಂದು ಆ ಮೇರು ವ್ಯಕ್ತಿತ್ವವನ್ನು ಗೌರವದಿಂದ ಸ್ಮರಿಸೋಣ. ದಕ್ಷ ಆಡಳಿತ, ಮಾದರಿ ಆಂತರಿಕ-ವಿದೇಶಾಂಗ ವ್ಯವಹಾರ, ಸದೃಢ ಆರ್ಥಿಕತೆ ಮುಂತಾದ ಸ್ಮರಣೀಯ ಕಾರ್ಯವೈಖರಿ ಮೂಲಕ ನಾಡಿನ ಇತಿಹಾಸದಲ್ಲಿ ಅವರು ಆದರ್ಶಪ್ರಾಯರೆನಿಸಿಕೊಂಡವರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.