ಟಿಕ್ಟಾಕ್, ರೀಲ್ಸ್ ಮೂಲಕ ಬಹುಬೇಗ ಜನಪ್ರೀಯರಾಗಲು ಯುವಜನತೆ ಆನ್ಲೈನ್ ಲೋಕದಲ್ಲೇ ಮುಳುಗಿರುತ್ತಾರೆ. ಇದರ ಜೊತೆ ಜೊತೆಗೆ ಅಶ್ಲೀಲತೆ ಮೂಲಕ ಬಹುಬೇಗ ತಲುಪುಬಹುದು ಎಂಬ ಉದ್ದೇಶದಿಂದ ಎಂತಹ ವಿಡಿಯೋಗಳಿಗೂ ಬೇಕಾದರೂ ಕೈಹಾಕುತ್ತಾರೆ.
ಆದ್ರೆ ಇಲ್ಲೊಬ್ಬಳು ಫೇಮಸ್ ಆಗಲೆಂದು ಮಗನೊಂದಿಗೆ ಡುಯೆಟ್ ಹಾಡುವ ವಿಡಿಯೋಗಳ ಹಂಚಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು, ರೀಲ್ಸ್ನಲ್ಲಿ ಯುವಕನೊಬ್ಬನ ಜೊತೆ ನೂರಾರು ಡುಯೆಟ್ ಹಾಡುಗಳಿಗೆ ಕುಣಿದಿರುವುದು ಕಾಣಬಹುದು. ಆದರೆ ಅವರಿಬ್ಬರು ಸ್ನೇಹಿತೆ, ಲವರ್ ಎಂದುಕೊಂಡವರಿಗೆ ಶಾಕ್ ನೀಡಿದ್ದು, ಅವರಿಬ್ಬರು ತಾಯಿ-ಮಗನಾಗಿದ್ದು ನೋಡುಗರು ಶಾಕ್ ಆಗಿದ್ದಾರೆ. ಹೀಗಾಗಿ ಮಹಿಳಾ ಆಯೋಗದವರೆಗೂ ಈ ವಿಡಿಯೋಗಳು ತಲುಪಿದ್ದು, ಮಹಿಳೆಯ ಹುಡುಕಾಟದಲ್ಲಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ಮುಂಬೈನ ರಚನಾ ಎಂಬಾಕೆ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಆತ ನನ್ನ ಮಗ ಎಂದು ಹೇಳಿಕೊಂಡಿದ್ದಾಳೆ. ಆದ್ರೆ ಆಕೆ ಅಪ್ಲೋಡ್ ಮಾಡಿರುವ ಎಲ್ಲಾ ವಿಡಿಯೋಗಲ್ಲಿ ಮಗನನ್ನು ಒತ್ತಾಯ ಪೂರ್ವಕವಾಗಿ ಡ್ಯಾನ್ಸ್ ಮಾಡುವಂತೆ ಡುಯೆಟ್ ಹಾಡಿಗೆ ಕುಣಿಯುವಂತೆ ಪ್ರೇರೇಪಿಸಿದಂತಿದೆ. ಹೀಗಾಗಿ ಆಕೆಯ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಲಾಗಿದ್ದು, ತೀವ್ರವಾಗಿ ಪರಿಶೀಲನೆ ನಡೆಸಿದವರಿಗೆ ಆಕೆ ಯುವಕನ ಮಲತಾಯಿ ಎಂಬುದು ತಿಳಿದುಬಂದಿದೆ.
ಆ ಯುವಕನ ತಂದೆ ಮೊದಲ ಪತ್ನಿ ನಿಧನದ ಬಳಿಕ ಇನ್ನೊಂದು ಮದುವೆಯಾಗಿದ್ದು, ಆದ್ರೆ ಆಕೆ ಮಗನ ಸಮಾನವಾದವನ ಜೊತೆ ಡುಯೇಟ್ ಹಾಡುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.