ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳಿಗೆ ನೀಡಲಾಗಿದ್ದ ಜಿಎಸ್‌ಟಿ ವಿನಾಯಿತಿಯನ್ನು ಕೇಂದ್ರ ಸರ್ಕಾರದ ಜಿಎಸ್‌ಟಿ ಮಂಡಳಿ ಹಿಂಪಡೆದಿದ್ದು, ನಾಳೆಯಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ.
ಹೌದು, ‘ನಂದಿನಿ’ ಬ್ರ್ಯಾಂಡ್‌ನ ಅಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದನಾ ಮಹಾ ಮಂಡಳವೂ (ಕೆಎಂಎಫ್) ಮಜ್ಜಿಗೆ, ಮೊಸರು, ತುಪ್ಪ ಸೇರಿ ಹಲವು ಉತ್ಪನ್ನಗಳ ಬೆಲೆ ಏರಿಕೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ನಾಳೆಯಿಂದ ಈ ಸರಕುಗಳು ದುಬಾರಿ:
➤ ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ, ಬೆಣ್ಣೆ, ಹಾಲಿನ ಬೆಲೆಗಳ ಮೇಲೆ ಶೇ.5 ರಷ್ಟು GST
➤ ಚೆಕ್‌ಬುಕ್ ಸೇವಾ ತೆರಿಗೆ ಶೇ.18 ರಷ್ಟು ಏರಿಕೆ
➤ ಆಸ್ಪತ್ರೆಗಳಲ್ಲಿ ರೂ 5,000 (ಐಸಿಯು ಅಲ್ಲದ) ಕ್ಕಿಂತ ಹೆಚ್ಚಿನ ಕೊಠಡಿಗಳ ಬಾಡಿಗೆಗೆ ಶೇ.5 ರಷ್ಟು ಜಿಎಸ್‌ಟಿ
➤ LED ಬಲ್ಬ್ ಮೇಲೆ ಶೇ.18 ರಷ್ಟು ಜಿಎಸ್‌ಟಿ
➤ ಪ್ರಿಂಟಿಂಗ್, ಡ್ರಾಯಿಂಗ್ ಇಂಕ್ ಸಾಮಗ್ರಿಗಳಿಗೆ ಶೇ.18 ರಷ್ಟು ತೆರಿಗೆ
➤ ಬ್ಲೇಡ್‌ಗಳು, ಕತ್ತರಿ, ಪೆನ್ಸಿಲ್ ಶಾರ್ಪನರ್‌ಗಳು, ಚಮಚಗಳು, ಫೋರ್ಕ್‌ಗಳ ಜಿಎಸ್‌ಟಿ ಶೇ.18 ರಷ್ಟು ಹೆಚ್ಚಳ.