ಲಲಿತ್ ಮೋದಿಗಿಂತ ಮೊದಲೇ 9 ಜನರೊಂದಿಗೆ ಖ್ಯಾತ ನಟಿ ಸುಸ್ಮಿತಾ ಸೇನ್ ಸಹಜೀವನ; ಯಾರೊಂದಿಗೆ ಗೊತ್ತೇ..? ಇಲ್ಲಿದೆ ನೋಡಿ

ಮಾಜಿ ವಿಶ್ವ ಸುಂದರಿ ಮತ್ತು ಖ್ಯಾತ ನಟಿ ಸುಶ್ಮಿತಾ ಸೇನ್ ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆಗಿನ ಡೇಟಿಂಗ್ ಹಾಟ್ ಟಾಪಿಕ್ ಆಗಿದೆ. ಸುಶ್ಮಿತಾ ಸೇನ್ ನೊಂದಿಗೆ ಹೊಸ ಜೀವನ ಆರಂಭಿಸಿದ್ದೇನೆ ಎಂದು ಘೋಷಿಸಿದ…

sushmitha sen vijayaprabha news1

ಮಾಜಿ ವಿಶ್ವ ಸುಂದರಿ ಮತ್ತು ಖ್ಯಾತ ನಟಿ ಸುಶ್ಮಿತಾ ಸೇನ್ ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆಗಿನ ಡೇಟಿಂಗ್ ಹಾಟ್ ಟಾಪಿಕ್ ಆಗಿದೆ. ಸುಶ್ಮಿತಾ ಸೇನ್ ನೊಂದಿಗೆ ಹೊಸ ಜೀವನ ಆರಂಭಿಸಿದ್ದೇನೆ ಎಂದು ಘೋಷಿಸಿದ ಲಲಿತ್ ಮೋದಿ, ಇಬ್ಬರೂ ಒಟ್ಟಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಇವರಿಬ್ಬರೂ ಮದುವೆಯಾಗಿದ್ದಾರಾ? ಎಂಬ ಚರ್ಚೆ ಶುರುವಾದಾಗ. ಇನ್ನೂ ಮದುವೆಯಾಗಿಲ್ಲ, ಡೇಟಿಂಗ್ ಮಾಡುತ್ತಿದ್ದೇವೆ ಎಂದು ಲಲಿತ್ ಮೋದಿ ಸ್ಪಷ್ಟಪಡಿಸಿದರು. ಮಾಲ್ಡೀವ್ಸ್ ಮತ್ತು ಸಾರ್ಡಿನಿಯಾಗೆ ಪ್ರವಾಸದ ನಂತರ ಲಂಡನ್‌ಗೆ ಬಂದಿದ್ದೇವೆ ಎಂದು ಹೇಳುವ ಮೂಲಕ ನಟಿ ಸುಶ್ಮಿತಾ ಸೇನ್ ತಮ್ಮೊಂದಿಗೆ ಇರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.

ಆದರೆ ಇದೀಗ ಸುಶ್ಮಿತಾ ಸೇನ್ ಡೇಟಿಂಗ್ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಹೌದು, ಲಲಿತ್ ಮೋದಿಗೂ ಮುನ್ನ ಸುಶ್ಮಿತಾ 9 ಜನರೊಂದಿಗೆ ಸಹ ಜೀವನ ನಡೆಸಿದ್ದಳು ಎನ್ನಲಾಗಿದ್ದು, ತನಗಿಂತ 15 ವರ್ಷ ಕಿರಿಯ ರೂಪದರ್ಶಿ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡಿದ್ದಳು. ಬಳಿಕ ಮೂರು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು.

Vijayaprabha Mobile App free

ದಸ್ತಕ್ ಚಿತ್ರದಲ್ಲಿ ನಟಿಸುವಾಗ ನಿರ್ದೇಶಕ ವಿಕ್ರಮ್ ಭಟ್ ಅವರ ಪರಿಚಯವಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು.. ಕೆಲ ದಿನಗಳ ಕಾಲ ಲವ್ ಟ್ರ್ಯಾಕ್ ನಡೆಸಿದ್ದರು. ಆದರೆ ವಿಕ್ರಮ್ ತನ್ನ ಹೆಂಡತಿಗೆ ಅನ್ಯಾಯ ಮಾಡಲು ಬಯಸಲಿಲ್ಲ.. ಸುಶ್ಮಿತಾ ಸೇನ್ ಜೊತೆ ತನ್ನ ಪ್ರೇಮ ಪಯಣವನ್ನು ಕೊನೆಗೊಳಿಸಿದನು. ಆ ನಂತರ ಸುಶ್ಮಿತಾ ಸೇನ್ 2000 ರಲ್ಲಿ ನಿರ್ದೇಶಕ ಮಾನವ್ ಮೆನನ್ ಅವರನ್ನು ಪ್ರೀತಿಸುತ್ತಿದ್ದರು. ಬಹಳ ದಿನಗಳಿಂದ ಪ್ರೀತಿಸುತ್ತಿದ್ದರೂ ಇಬ್ಬರೂ ಮದುವೆಯಾಗಿರಲಿಲ್ಲ. ಇದಾದ ನಂತರ ಸುಶ್ಮಿತಾ ಹೊಟೇಲ್ ಉದ್ಯಮಿ ಸಂಜಯ್ ನಾರಂಗ್ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಇತ್ತು. ಎಂಗೇಜ್ ಮೆಂಟ್ ಕೂಡ ಆಯ್ತು ಎಂಬ ಮಾತುಗಳು ಕೇಳಿಬಂದಾಗ ಅದು ಮದುವೆಯವರೆಗೂ ಹೋಗಿರಲಿಲ್ಲ.

ಇನ್ನು, ಸುಸ್ಮಿತಾಸೇನ್ ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಮತ್ತು ನಟ ರಣದೀಪ್ ಅವರೊಂದಿಗೆ ಸಹ ಜೀವನ ನಡೆಸಿದ್ದು, ಮುದ್ದಾಸಿರ್, ಹೃತಿಕ್ ಖಾಸಿನ್, ಸಬೀರ್ ಮತ್ತು ಇಮ್ತಿಯಾಜ್ ಅವರೊಂದಿಗೆ ಸಂಬಂಧವನ್ನು ಉಳಿಸಿಕೊಂಡರು.

ಸದ್ಯ 46 ವರ್ಷದ ಸುಶ್ಮಿತಾ ಸೇನ್ 56 ವರ್ಷದ ಲಲಿತ್ ಮೋದಿಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದ್ದು, ಅವರ ಡೇಟಿಂಗ್ ಸುದ್ದಿಯೊಂದಿಗೆ, ಸುಶ್ಮಿತಾ ಅವರ ಜೊತೆ ತಳಕು ಹಾಕಿಕೊಂಡ ವ್ಯಕ್ತಿಗಳ ಹೆಸರುಗಳು ಮುನ್ನೆಲೆಗೆ ಬರುತ್ತಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.