ಚಿನ್ನ ಖರೀದಿಸಿ ಬರುವೆ ಎಂದು ಹೋದವ, ಶವವಾಗಿ ಮೂಟೆಯಲ್ಲಿ ಸಿಕ್ಕ!; ಪೋಲೀಸರ ತಲೆ ಕೆಡಿಸಿದ್ದ ಕೇಸ್​ ಕ್ಲಿಯರ್​ ಆಗಿದ್ದು ಹೇಗೆ..?

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ, ಮೂಟೆ ಕಟ್ಟಿ ಬಿಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಮೂಟೆಯಲ್ಲಿ ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಕೊಲೆಗಾರರನ್ನ ಜೈಲಿಗಟ್ಟಿದ್ದಾರೆ. ಆದರೆ, ಅತ್ತ…

death-vijayaprabha-news

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ, ಮೂಟೆ ಕಟ್ಟಿ ಬಿಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಮೂಟೆಯಲ್ಲಿ ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಕೊಲೆಗಾರರನ್ನ ಜೈಲಿಗಟ್ಟಿದ್ದಾರೆ. ಆದರೆ, ಅತ್ತ ಮಗ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಎಂದು ಕಂಪ್ಲೇಟ್ ಕೊಟ್ಟಿದ್ದ ಪೋಷಕರಿಗೆ ಸಿಕ್ಕಿದ್ದು ಮಾತ್ರ ಕೊಳೆತ ಸ್ಥಿತಿಯಲ್ಲಿ ಮಗನ ಶವ.

ಬೆಂಗಳೂರಿನ ಬನಶಂಕರಿಯ ಸರಬಂಡೆ ಪಾಳ್ಯದ ಯುವಕ ದಿವಾಕರ್ ಕೊಲೆಯಾದ ವ್ಯಕ್ತಿಯಾಗಿದ್ದು,ಜನವರಿ 20 ರಂದು ಚಿನ್ನ ಖರೀದಿಸಿ ಬರುವೆ ಎಂದು ಮನೆಯಿಂದ 5 ಲಕ್ಷ ರೂಪಾಯಿ ತೆಗದುಕೊಂಡು ಹೋಗಿದ್ದ ವ್ಯಕ್ತಿ ವಾಪಸ್​ ಬಂದಿರಲಿಲ್ಲ. ಕಡಿಮೆ ಬೆಲೆಗೆ ಚಿನ್ನ ಕೊಡ್ತೀವಿ ಅಂತಾ ಕರೆದ ದುಷ್ಕರ್ಮಿಗಳು ಸುಂಕದಕಟ್ಟೆಯಲ್ಲಿ ದಿವಾಕರ್​ನನ್ನು ಕೊಂದು ಶವವನ್ನು ಮೂಟೆಕಟ್ಟಿ ಬೈಕ್ ಸಮೇತ ಮಾಗಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದರು.

ಇದ್ಯಾವುದರ ಮಾಹಿತಿ ಗೊತ್ತಿಲ್ಲದ ಪಾಲಕರು, ಮಗ ದಿವಾಕರ್​ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದು, ಇತ್ತ ಪೊಲೀಸರು ದಿವಾಕರ್​ಗಾಗಿ ಹುಡುಕಾಟ ನಡೆಸುತ್ತಿದ್ದರು. ಅತ್ತ ಮಾಗಡಿ ಕೆರೆಯಲ್ಲಿ ಮೂಟೆ ಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.