ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ ಚಂದನಾ ಡೆತ್​ನೋಟಲ್ಲಿದೆ ಸಾವಿನ ರಹಸ್ಯ!

ಚಾಮರಾಜನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿ ಚಂದನಾ(26) ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದು, ಎಲ್ಲರು ಬೇಸರ ಪಡುವಂತೆ ಮಾಡಿದೆ. ಆದರೆ ಉಪನ್ಯಾಸಕಿ ಚಂದನಾ ಸಾಯುವ ಸಂದರ್ಭದಲ್ಲಿ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ…

Lecturer Chandana death

ಚಾಮರಾಜನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿ ಚಂದನಾ(26) ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದು, ಎಲ್ಲರು ಬೇಸರ ಪಡುವಂತೆ ಮಾಡಿದೆ. ಆದರೆ ಉಪನ್ಯಾಸಕಿ ಚಂದನಾ ಸಾಯುವ ಸಂದರ್ಭದಲ್ಲಿ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದರು. ಆದರೆ, ಇಷ್ಟು ಮಾತ್ರವಲ್ಲ ಇದರಲ್ಲಿ ಇನ್ನಷ್ಟು ಮಾಹಿತಿ ಇದೆ.

ಹೌದು ಡೆತ್ ನೋಟ್ ನಲ್ಲಿ ಚಂದನಾ ನನ್ನ ಸಾವಿಗೆ ನಾನೇ ಕಾರಣ ಬರೆದಿದ್ದು, ‘ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆ ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಿದ್ದೀರಾ? ನಾನು ಯಾರ ಪರ ಇರಲಿ, ಯಾರ ಮಾತು ಕೇಳಿಲಿ? ಎಂದು ಗೊತ್ತಾಗುತ್ತಿಲ್ಲ. ನಾನು ಏನು ಮಾಡಲು ಅಂದುಕೊಂಡರೂ ಆಗುತ್ತಿಲ್ಲ ಮಾತು ಮಾಡೋಕ್ಕೆ ಬಿಡುತ್ತಿಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿ ಸಾಕಾಗಿದ್ದು, ಮುಂದೆ ಏನು ಮಾಡಬೇಕು? ಹೇಗೆ ಇರಬೇಕು? ಎಲ್ಲ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ಮೈಂಡ್​ ಫುಲ್​ ಬ್ಲ್ಯಾಂಕ್​ ಆಗಿದ್ದು, ಏನು ಮಾಡೋಕು ಆಗುತ್ತಿಲ್ಲ’ ಎಂದು ಬರೆದಿದೆ.

ಈ ಕಡೆ ಕಾಲೇಜು, ಆ ಕಡೆ ಮನೆ. ಎರಡೂ ಕಡೆ ಒಟ್ಟಿಗೆ ಹೇಗೆ ಇರೋದಿಕ್ಕೆ ಆಗುತ್ತೆ? ಕೆಲಸ ಹೊಸದಾಗಿದ್ದು, ಮಕ್ಕಳಿಗೆ ಅರ್ಥ ಆಗೋ ಹಾಗೆ ಪಾಠ ಮಾಡಬೇಕು, ಓದಬೇಕು, ನೋಟ್ಸ್​​ ಮಾಡಬೇಕು. ನಾನು ಓದೋದು ನಿಧಾನವಾಗಿದ್ದು, ಟೈಂ ಹೇಗೆ ಮ್ಯಾನೇಜ್​ ಮಾಡಬೇಕು ಗೊತ್ತಾಗುತ್ತಿಲ್ಲ. ಅದಕ್ಕೆ ನಾನು ಮನೆಗೂ ಸರಿಯಾಗಿ ಬರ್ತಾ ಇರಲಿಲ್ಲ. ಸಾರಿ ಪಪ್ಪಾ.. ನನಗೆ ಆಗುತ್ತಿಲ್ಲ. ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿಮ್ಮದೇ ಆದ ದೃಷ್ಟಿಯಲ್ಲಿ ನೋಡ್ತೀರ, ಸಾರಿ ಫ್ರೆಂಡ್ಸ್​ ಆಲ್… ನಾನು ಯಾರನ್ನೂ ಪ್ರೀತಿ ಮಾಡ್ತಿಲ್ಲ, ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದೆ

Vijayaprabha Mobile App free

ಇನ್ನು, ಮೇಘ ಅಕ್ಕ ಯಾರಿಗೂ ಹಿಂಸೆ ಕೊಡಬೇಡ ಎಂದು ಬರೆದಿದ್ದು, ಅನು ಅಕ್ಕ ಸಾರಿ ಕಣೆ, ನೀನು ನನಗೆ ಎಲ್ಲ ಮಾಡಿದ್ರೂ ಯೂ ಆರ್​ ಮೈ ಬೆಸ್ಟ್​ ಎಂದು ಬರೆದಿದೆ. ನಿತ್ಯ ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊ, ಈ ಕೆಲಸ ಬೇಡ. ಆರೋಗ್ಯ ಹಾಳಾಗುತ್ತೆ. ಅಜ್ಜಿ, ಅಮ್ಮ ಎಲ್ಲರೂ ಚೆನ್ನಾಗಿರಿ. ರಮ್ಯ ಮೇಡಂ ಸಾರಿ… ಮಿಸ್​ ಯು ಆಲ್​’ ಎಂದು ಡೆತ್​ನೋಟ್​ನಲ್ಲಿ ಬರೆದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.