ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ ಸ್ಥಿರವಾಗಿದೆ.
ಮೈಸೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹93.95 (₹0.32 ಪೈಸೆ ಇಳಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹86.12 (₹0.29 ಪೈಸೆ ಇಳಿಕೆ) ಆಗಿದೆ. ಇನ್ನು ದಾವಣಗೆರೆಯಲ್ಲಿ 1 ಲೀಟರ್ ಪೆಟ್ರೋಲ್ ದರ ₹95.77 (₹0.19 ಪೈಸೆ ಇಳಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹87.66 (₹0.18 ಪೈಸೆ ಇಳಿಕೆ) ಆಗಿದೆ.
ಗುರುವಾರದ ಚಿನ್ನ, ಬೆಳ್ಳಿ ದರ:
ದೇಶದಲ್ಲಿ ಗುರುವಾರ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,343 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹41,800 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,600 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹67,000 ಆಗಿದೆ.
ಇನ್ನು ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹43,430 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,430 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹67,000 ಆಗಿದೆ.