ವರಮಹಾಲಕ್ಷ್ಮೀ ಹಬ್ಬದಂದೇ ಚಿನ್ನ ಏರಿಕೆಯಾಗಿದ್ದು, ಎಲ್ಲರಿಗೂ ಶಾಕ್ ಆಗಿದೆ. ಎರಡು ದಿನಗಳಿಂದ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಪ್ರತಿ ಗ್ರಾಂ.ಗೆ 150 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ 200 ರೂ. ಹೆಚ್ಚಳವಾಗಿದೆ.
ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ.ಗೆ 47,550 ರೂ. ಇದ್ದುದು, ಇಂದು 47,700 ರೂ. ಆಗಿದೆ. ಇನ್ನು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ.ಗೆ ನಿನ್ನೆ 51,880 ಇದ್ದುದು, ಇಂದು 52,040 ಆಗಿದೆ. ಅಲ್ಲದೆ, 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ.ಗೆ ಇಂದು 4,770 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ.ಗೆ 5,204 ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಇಂತಿದೆ. ಚೆನ್ನೈ- 48,250 ರೂ. ಮುಂಬೈ, ಕೊಲ್ಕತ್ತಾ, ಹೈದರಾಬಾದ್- 47,500 ರೂ ಇದೆ. ಇನ್ನು ಬೆಳ್ಳಿಯ ಬೆಲೆ ಕೆಜಿಗೆ ಬೆಂಗಳೂರಿನಲ್ಲಿ 63,200 ಇದೆ.