ದೇಶದ ಚಿನಿವಾರ ಪೇಟೆಯಲ್ಲಿ ಕಳೆದೆರಡು ದಿನಗಳಿಂದ ಏರಿಕೆ ಕಂಡ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದ್ದು, ಚಿನ್ನದ ಮೇಲೆ 440 ರೂ ಹೆಚ್ಚಳವಾಗಿದ್ದು, ಬೆಳ್ಳಿಯ ಬೆಲೆಯೂ 1 ಕೆಜಿಗೆ 800 ರೂ ಹೆಚ್ಚಾಗಿದೆ.
ಹೌದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹400 ಹೆಚ್ಚಳವಾಗಿ ₹48,150 ಇದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹440 ಏರಿಕೆಯಾಗಿ ₹52,530 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹800 ಹೆಚ್ಚಳವಾಗಿ ₹59,300 ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹400 ಏರಿಕೆಯಾಗಿ ₹48,200 ಆಗಿದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹440 ಏರಿಕೆಯಾಗಿ ₹52,580 ದಾಖಲಾಗಿದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಚೆನ್ನೈ- 49,140 ರೂ, ಮುಂಬೈ- 48,150 ರೂ, ದೆಹಲಿ- 48,300 ರೂ, ಕೊಲ್ಕತ್ತಾ- 48,150 ರೂ ದಾಖಲಾಗಿದೆ.