ದೀಪಾವಳಿ ಹಬ್ಬ ಬಂದರೆ ಸಾಕು ತೆಂಗಿನಕಾಯಿ ದರ ದುಪ್ಪಟ್ಟಾಗಿರುತ್ತದೆ. ಆದರೆ, ಈ ಬಾರಿಯ ದೀಪಾವಳಿಗೆ ರೇಟ್ ಕಡಿಮೆಯಾಗಿದ್ದು, ಕಳೆದ ವರ್ಷ 20 ರೂಪಾಯಿಯಿಂದ 25ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಬೆಲೆ ಭಾರೀ ಕುಸಿತ ಕಂಡಿದೆ.
ಇದೀಗ ಒಂದು ಕಾಯಿ ದರ 12ರಿಂದ 15 ರೂ ಮಾತ್ರವಾಗಿದ್ದು, ಈ ವರ್ಷ ತೆಂಗಿನ ಬೆಳೆ ಜಾಸ್ತಿಯಾಗಿರುವುದು ದರ ಇಳಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಸಂತಸ ತಂದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.