ಬೆಂಗಳೂರು: ದೇಶದಲ್ಲಿ ಇಂದು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಆದರೆ ರಾಜ್ಯದಲ್ಲಿ ಮಾತ್ರ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.98 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.21 ದಾಖಲಾಗಿ ಸ್ಥಿರವಾಗಿದೆ. ಮೈಸೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.69 (₹0.13 ಪೈಸೆ ಇಳಿಕೆ) ಆಗಿದ್ದು, 1 ಲೀಟರ್ ಡೀಸೆಲ್ ದರ ₹89.95 (₹0.12 ಪೈಸೆ ಇಳಿಕೆ) ಆಗಿದೆ. ಇನ್ನು ದಾವಣಗೆರೆಯಲ್ಲಿ ಸಹ 1 ಲೀಟರ್ ಪೆಟ್ರೋಲ್ ದರ ₹95.81 (₹0.08 ಪೈಸೆ ಇಳಿಕೆ) ಆಗಿದೆ.
ಚಿನ್ನದ ದರ ಇಳಿಕೆ:
ದೇಶದಲ್ಲಿ ಗುರುವಾರ ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,770 (₹180 ಇಳಿಕೆ) ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹46,770 (₹180 ಇಳಿಕೆ) ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆ ₹70,510 ದಾಖಲಾಗಿದೆ.
ಇನ್ನು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹43,750 (₹100 ಇಳಿಕೆ) ಆಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹47,730 (₹110 ಇಳಿಕೆ) ದಾಖಲಾಗಿದೆ. ಒಂದು ಕೆಜಿ ಬೆಳ್ಳಿ ದರ ₹70,010 ಆಗಿದೆ.