ಕೇಂದ್ರ ನೀತಿ ಆಯೋಗದ ಮಾದರಿಯಂತೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ ಎಂದು ಮರು ನಾಮಕರಣಗೊಳಿಸಲಾಗಿದೆ.
ಹೌದು, ರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ ಎಂದು ಮರು ನಾಮಕರಣಗೊಳಿಸಲಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಲುವಾಗಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದನ್ನು ಈ ಸಂಸ್ಥೆ ಶಿಫಾರಸು ಮಾಡುತ್ತದೆ.
ರಾಜ್ಯ ಮಟ್ಟದ ಚಿಂತನಾ ಬಳಗವಾಗಿ ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ ಕಾರ್ಯ ನಿರ್ವಹಿಸಲಿದ್ದು, ಸರ್ಕಾರಿ ಯೋಜನೆ, ಅದಕ್ಕೆ ಸಂಬಂಧಿಸಿದ ವಿಷಯ ಪರಿಣತರನ್ನು ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನಗೊಳಿಸಲಾಗುವುದು. ಇನ್ನು, ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ ಗೆ ಮುಖ್ಯಮಂತ್ರಿ ಅವರು ಅಧ್ಯಕ್ಷರಾಗಿರುತ್ತಾರೆ.