ಮಂಡ್ಯ : ಒಂದೇ ಕುಟುಂಬದ ಓರ್ವ ಮಹಿಳೆ ನಾಲ್ವರ ಮಕ್ಕಳು ಸೇರಿದಂತೆ ಐವರನ್ನು ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಹತ್ಯೆ ಘಟನೆ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ. ಆರ್. ಎಸ್ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.
ಹೌದು, ಶ್ರೀರಂಗಪಟ್ಟಣ ತಾಲೂಕಿನ ಕೆ. ಆರ್. ಎಸ್ ಗ್ರಾಮದ ಬಜಾರ್ ಲೈನ್ ನಲ್ಲಿ ಲಂಬಾಣಿ ತಾಂಡಾದ ಭೋರಿ ಕುಟುಂಬದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬಕ್ಕೆ ಸಂಬಂದಿಸಿದ ಲಕ್ಷ್ಮಿ 26, ರಾಜ್, 12, ಕೋಮಲ್7, ಕುನಾಲ್ 4, ಗೋವಿಂದ 8 ಕೊಲೆಯಾದ ದುರ್ದೈವಿಗಳಾಗಿದ್ದು, ಮನೆಯಲ್ಲಿ ಮಾರಕಾಸ್ತ್ರದಿಂದ ಇವರನ್ನ ಹತ್ಯೆ ಮಾಡಲಾಗಿದೆ.
ಇನ್ನು, ಈ ಭೀಕರ ಘಟನೆಯಿಂದ ಸುತ್ತಮುತ್ತಲ ಜನರು ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆ ಮಾಡಿರೋ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಈ ಸಂಬಂಧ ಕೆ. ಆರ್. ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.