ಕರೋನ ಕಾರಣದಿಂದ ಕೆಲಸ ಕಳೆದುಕೊಂಡಿದ್ದೀರಾ? ಮೋದಿ ಸರ್ಕಾರ 10 ಲಕ್ಷ ರೂವರೆಗೂ ಸಾಲ ನೀಡುತ್ತಿದೆ..! ಈ ರೀತಿ ಅರ್ಜಿ ಸಲ್ಲಿಸಿ!

ಕೆಲಸ ಕಳೆದುಕೊಂಡಿದ್ದೀರಾ? ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ವ್ಯಾಪಾರ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರ 10 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಮುದ್ರಾ ಯೋಜನೆಯಡಿ ಈ ರೀತಿಯ…

money vijayaprabha news

ಕೆಲಸ ಕಳೆದುಕೊಂಡಿದ್ದೀರಾ? ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ವ್ಯಾಪಾರ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರ 10 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಮುದ್ರಾ ಯೋಜನೆಯಡಿ ಈ ರೀತಿಯ ಸಾಲಗಳನ್ನು ಪಡೆಯಬಹುದು.

ವ್ಯಾಪಾರ ಮಾಡಲು ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು ಪ್ರಧಾನ್ ಮಂತ್ರಿ ಮುದ್ರ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಮುದ್ರಾ ಯೋಜನೆಯಡಿ ಮೂರು ರೀತಿಯ ಸಾಲಗಳು ಲಭ್ಯವಿದ್ದು, ನಿಮ್ಮ ಅರ್ಹತೆ ಮತ್ತು ಅಗತ್ಯದ ಆಧಾರದ ಮೇಲೆ ನೀವು ಸಾಲ ಪಡೆಯಬಹುದು.

ಶಿಶು ಸಾಲದಡಿ ನೀವು 50,000 ರೂ.ವರೆಗೆ ಸಾಲ ಪಡೆಯಬಹುದು. ಕಿಶೋರ್ ಸಾಲದಡಿಯಲ್ಲಿ ನೀವು 50,000 ರೂ.ಗಳಿಂದ 5 ಲಕ್ಷ ರೂವರೆಗೂ ಹಾಗು ತರುಣ್ ಸಾಲದಡಿಯಲ್ಲಿ ನೀವು 5 ಲಕ್ಷದಿಂದ 10 ಲಕ್ಷ ರೂ.ವರೆಗೂ ಸಾಲ ಪಡೆಯಬಹುದು. ನಿಮಗೆ ಎಷ್ಟು ಹಣ ಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

Vijayaprabha Mobile App free

ಯಾವುದೇ ಗ್ಯಾರಂಟಿ ಇಲ್ಲದೆ ನೀವು ಸಾಲ ಪಡೆಯಬಹುದು. ಸಾಲವನ್ನು 5 ವರ್ಷಗಳಲ್ಲಿ ಮರುಪಾವತಿಸಬೇಕು. ಯಾವುದೇ ಸಂಸ್ಕರಣಾ ಶುಲ್ಕದ (Processing fee) ಅಗತ್ಯವಿಲ್ಲ. ಸಾಲಗಳ ಮೇಲಿನ ಬಡ್ಡಿದರಗಳು ಬ್ಯಾಂಕ್ ಆಧಾರದ ಮೇಲೆ ಬದಲಾಗುತ್ತವೆ. 12 ರಷ್ಟು ಬಡ್ಡಿದರ ಪಡೆಯಬಹುದು. Http://www.mudra.org.in/ ವೆಬ್‌ಸೈಟ್ ಮೂಲಕ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.