ಬೆಂಗಳೂರು: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವುದರಿಂದ ಬೆಳೆ ಮಾಹಿತಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಬೆಳೆ ದರ್ಶಕ್ – 2020 ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು,ಇದರಲ್ಲಿ ರೈತರು ಆಕ್ಷೇಪಣೆ ಸಲ್ಲಿಸಬಹುದು.
ರೈತರು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ಮತ್ತು ವಿಸ್ತೀರ್ಣದ ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು. ಬೆಳೆ ಸಮೀಕ್ಷೆ ಮಾಹಿತಿ ಪ್ರಕಾರ ಯಾವುದೇ ಬೆಳೆ ಮಾಹಿತಿ ಲಭ್ಯವಿಲ್ಲದ ರೈತರು ತಾವು ಬೆಳೆ ಬೆಳೆದಿರುವುದಾಗಿ ಹಾಗೂ ಬೆಳೆಯ ವ್ಯತ್ಯಾಸವಿದ್ದಲ್ಲಿ, ಬೆಳೆ ಮಾಹಿತಿ ಪ್ರಕಾರ ಪಾಳು, ಕಟಾವಾದ ಪ್ರದೇಶ ಎಂದು ನಮೂದಿಸಿದ್ದು, ರೈತರು ತಾವು ಬೆಳೆ ಬೆಳೆದಿರುವುದಾಗಿ ಆಕ್ಷೇಪಣೆ ವ್ಯಕ್ತಪಡಿಸಬಹುದು.
ಈ ಕುರಿತು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಟ್ವೀಟ್ ಮಾಡಿದ್ದೂ, ನನ್ನ ಬೆಳೆ ನನ್ನ ಹಕ್ಕು ಎಂದು ರೈತ ಹೆಮ್ಮೆಯಿಂದ ಹೇಳುವ ರೈತ ಬೆಳೆ ಸಮೀಕ್ಷೆ ಅ.11ರವರೆಗೆ ಶೇ.98ರಷ್ಟು ಆ್ಯಪ್ ಮೂಲಕ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ 2 ಕೋಟಿ 6 ಲಕ್ಷ ಪ್ಲಾಟ್‌ಗಳು ರೈತ ಬೆಳೆಸಮೀಕ್ಷೆ ಆ್ಯಪ್ ಮೂಲಕ ಅಪ್ಲೋಡ್ ಆಗಿರುತ್ತವೆ.
ರೈತ ಬೆಳೆ ಆ್ಯಪ್ ಸಮೀಕ್ಷೆಗೆ ಅಕ್ಟೋಬರ್ 15 ಕೊನೆಯ ದಿನಾಂಕವಾಗಿರುತ್ತದೆ. ಅಲ್ಲದೇ ಅಪ್ಲೋಡ್ ಆದ ಮಾಹಿತಿಗಳಲ್ಲಿ ತಿದ್ದುಪಡಿ ಇದ್ದಲ್ಲಿ ಬೆಳೆ ದರ್ಶಕ್ ಆ್ಯಪ್ ಮೂಲಕ ತಿದ್ದುಪಡಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಭಾರಿ ಮಳೆ ಹಿನ್ನಲೆ; ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆರೆಂಜ್ & ಯೆಲ್ಲೋ ಅಲರ್ಟ್ ಘೋಷಣೆ!
ರೈತ ಬೆಳೆ ಆ್ಯಪ್ ಸಮೀಕ್ಷೆಗೆ ಅಕ್ಟೋಬರ್ 15 ಕೊನೆಯ ದಿನಾಂಕವಾಗಿರುತ್ತದೆ. ಅಲ್ಲದೇ ಅಪ್ಲೋಡ್ ಆದ ಮಾಹಿತಿಗಳಲ್ಲಿ ತಿದ್ದುಪಡಿ ಇದ್ದಲ್ಲಿ ಬೆಳೆ ದರ್ಶಕ್ ಆ್ಯಪ್ ಮೂಲಕ ತಿದ್ದುಪಡಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿರುತ್ತದೆ.#ಬೆಳೆಸಮೀಕ್ಷೆಉತ್ಸವ2020@DDChandanaNews @CMofKarnataka @KarnatakaVarthe @blsanthosh
2/2— Kourava B.C.Patil (@bcpatilkourava) October 12, 2020




