ಮುಂಬೈ: ಯುಎಇ ನಲ್ಲಿ ನಡೆಯುತ್ತಿರುವ ಐಪಿಎಲ್ 2020 ರ 13 ಆವೃತ್ತಿ ಪಂದ್ಯಗಳು ಪ್ಲೇ ಅಫ್ ಹಂತದಲ್ಲಿವೆ. ಐಪಿಎಲ್ ಮುಗಿಯುವ ಬೆನ್ನಲ್ಲೇ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ 2020-21ರ ಆವೃತ್ತಿಗೆ ನ.20 ರಂದು ಚಾಲನೆ ಸಿಗಲಿದೆ.
ಜ.11ರವರೆಗಿನ ಮೊದಲ ಹಂತದ 55 ಲೀಗ್ ಪಂದ್ಯಗಳ ವೇಳಾಪಟ್ಟಿ ಇಂದು ಬಿಡುಗಡೆಗೊಳಿಸಲಾಗಿದೆ. ಮಾಜಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡ ನ.22ರಂದು ಆತಿಥೇಯ ಎಫ್ಸಿ ಗೋವಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಇಂಡಿಯನ್ ಸೂಪರ್ ಲೀಗ್ ಟೂರ್ನಿಯನ್ನು ಒಟ್ಟು 115 ಪಂದ್ಯಗಳು ನಡೆಯಲಿದ್ದು ಲೀಗ್ ಪಂದ್ಯಗಳು ಫೆಬ್ರುವರಿವರೆಗೂ ಪ್ರತಿದಿನ ರಾತ್ರಿ 7.30 ಕ್ಕೆ ಪಂದ್ಯಗಳು ಆರಂಭವಾಗುತ್ತವ.
ಕೊರೋನಾ ಭೀತಿಯ ನಡುವೆ ಎಲ್ಲ ಪಂದ್ಯಗಳು ಗೋವಾದಲ್ಲಿ ಪ್ರೇಕ್ಷಕರಿಲ್ಲದೆ 3 ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಈ ಬಾರಿ ಒಟ್ಟು 11 ತಂಡಗಳು ಕಣದಲಿದ್ದು, ಈ ಟೂರ್ನಿಯಲ್ಲೂ ಕೂಡ ಐಪಿಎಲ್ ಮಾದರಿಯ ಬಯೋ-ಬಬಲ್ ಸೃಷ್ಟಿಸಲಾಗಿದ್ದು ಎಲ್ಲ ತಂಡಗಳು ಪ್ರತ್ಯೇಕ ಹೋಟೆಲ್ ಗಳಲ್ಲಿ ಉಳಿದುಕೊಂಡಿವೆ.
Fixtures for the first 11 rounds of the #HeroISL 2020-21 season are in!
Download the fixtures 👉 https://t.co/YFQofpBOhj https://t.co/zxq05hCnkH
— Indian Super League (@IndSuperLeague) October 30, 2020