ಮದುವೆಯಾಗಿ ಮೂರೇ ತಿಂಗಳಿಗೆ ತನ್ನ ಮೂರನೇ ಗಂಡನನ್ನು ಮನೆಯಿಂದ ಹೊರ ಹಾಕಿದ ಖ್ಯಾತ ನಟಿ..?

ಚೆನ್ನೈ : ದಕ್ಷಿಣ ಭಾರತದ ನಟಿ ವನಿತಾ ವಿಜಯಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಆದ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಗೆ ಸಂಬಂದಿಸಿದ ಪೀಟರ್ ಪಾಲ್ ಅವರೊಂದಿಗೆ ಜೂನ್ ತಿಂಗಳಲ್ಲಿ ನಟಿ ವನಿತಾ ವಿಜಯಕುಮಾರ್…

vanitha vijaykumar vijayaprabha news

ಚೆನ್ನೈ : ದಕ್ಷಿಣ ಭಾರತದ ನಟಿ ವನಿತಾ ವಿಜಯಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಆದ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಗೆ ಸಂಬಂದಿಸಿದ ಪೀಟರ್ ಪಾಲ್ ಅವರೊಂದಿಗೆ ಜೂನ್ ತಿಂಗಳಲ್ಲಿ ನಟಿ ವನಿತಾ ವಿಜಯಕುಮಾರ್ ಮೂರನೇ ಬಾರಿಗೆ ವಿವಾಹವಾಗಿದ್ದರು. ಪೀಟರ್ ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ವ್ಯಕ್ತಿ.ಆತನ ಜೊತೆ ನಾನು ಭವಿಷ್ಯದಲ್ಲಿ ತುಂಬಾ ಚೆನ್ನಾಗಿರುತ್ತೇನೆ ನಂಬಿಕೆಯಿಂದ ಮದುವೆಯಾಗಿದ್ದೇನೆ ಎಂದು ಹೇಳಿದ್ದರು . ಆದರೆ, ಪೀಟರ್ ತನಗೆ ವಿಚ್ಛೇದನ ನೀಡದೆ ನಟಿ ವನಿತಾ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಅವನ ಮೊದಲ ಹೆಂಡತಿ ಕೇಸ್ ಹಾಕುವ ಮುಕಾಂತರ ವಿವಾದ ಪ್ರಾರಂಭವಾಯಿತು.

ಚಿತ್ರರಂಗದ ಕೆಲವರು ವನಿತಾ ವಿಜಯಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇನ್ನೊಬ್ಬ ಮಹಿಳೆಯ ಜೀವನವನ್ನು ನಾಶಮಾಡುವ ಹಕ್ಕನ್ನು ಅವರಿಗೆ ಯಾರು ಕೊಟ್ಟಿದ್ದಾರೆ ಎಂದು ಟೀಕಿಸಿದ್ದರು. ಇವೆಲ್ಲದಕ್ಕೂ ಬಲವಾಗಿ ಉತ್ತರಿಸಿದ ವನಿತಾ ಅದನ್ನು ಕಾನೂನುಬದ್ಧವಾಗಿ ನೋಡಿಕೊಳ್ಳುವುದಾಗಿ ಹೇಳಿದ್ದರು. ಇತ್ತೀಚಿನ ಮಾಹಿತಿಯ ಪ್ರಕಾರ, ನಟಿ ವನಿತಾ ವಿಜಯಕುಮಾರ್ ಅವರ ಮದುವೆ ಮೂರು ತಿಂಗಳಿಗೆ ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ. ವನಿತಾ ಅವರು ತನ್ನ ಮೂರನೇ ಗಂಡನನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ವನಿತಾ ಮತ್ತು ಪೀಟರ್ ತಮ್ಮ ಮಕ್ಕಳನ್ನು ಗೋವಾ ಟ್ರಿಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ಇವರಿಬ್ಬರು ತೆಗೆದ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಗೋವಾ ಟ್ರಿಪ್ ನಲ್ಲಿ ಕುಡಿದ ಅಮಲಿನಲ್ಲಿ ಪೀಟರ್, ವನಿತಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಇದರೊಂದಿಗೆ ವನಿತಾ ಕೋಪಗೊಂಡು ಗಂಡನನ್ನು ಹೊಡೆದಿದ್ದಾಳೆ ಎನ್ನಲಾಗಿದ್ದು, ಗೋವಾ ಟ್ರಿಪ್ ನಿಂದ ಚೆನ್ನೈಗೆ ಬಂದ ನಂತರವೂ ಪೀಟರ್ ನಡವಳಿಕೆಯು ಬದಲಾಗಲಿಲ್ಲ ಎಂದು ವನಿತಾ ಅವನನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ ಎಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Vijayaprabha Mobile App free

ಇದನ್ನು ಓದಿ: ಅಂತರ್ ಧರ್ಮ ವಿವಾಹ: ಬಾಲಿವುಡ್ ನಟ ಶಾರುಖ್ ಖಾನ್ ಧರ್ಮದ ಬಗ್ಗೆ ಪತ್ನಿ ಗೌರಿ ಖಾನ್ ಖಡಕ್ ಉತ್ತರ…?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.