ಅಪಘಾತದಲ್ಲಿ ಯುವ ಕಾರ್ಯಕರ್ತ ಸಾವು; ಪೋಷಕರ ಆಕ್ರಂದನ ಕಂಡು ಕಣ್ಣೀರಾಕಿದ ರೇಣುಕಾಚಾರ್ಯ..!

ದಾವಣಗೆರೆ: ಶಿವಾಜಿ ಅಂತಾನೇ ಫೇಮಸ್ ಆಗಿದ್ದ, ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ, ಅಕ್ಕಪಕ್ಕ ಊರು ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲಿಯೂ ಅಪಾರ ಸ್ನೇಹಿತ ಬಳಗ ಹೊಂದಿದ್ದ ಕ್ರಿಯಾಶೀಲ ಯುವಕ, ಅಪಘಾತದಲ್ಲಿ ಮೃತಪಟ್ಟಿದ್ದ, 21 ವರ್ಷದ ಶಿವು…

MP -Renukacharya-vijayaprabha-news

ದಾವಣಗೆರೆ: ಶಿವಾಜಿ ಅಂತಾನೇ ಫೇಮಸ್ ಆಗಿದ್ದ, ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ, ಅಕ್ಕಪಕ್ಕ ಊರು ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲಿಯೂ ಅಪಾರ ಸ್ನೇಹಿತ ಬಳಗ ಹೊಂದಿದ್ದ ಕ್ರಿಯಾಶೀಲ ಯುವಕ, ಅಪಘಾತದಲ್ಲಿ ಮೃತಪಟ್ಟಿದ್ದ, 21 ವರ್ಷದ ಶಿವು ಅವರ ಪೋಷಕರ ಆಕ್ರಂದನ ಕಂಡು ಎಂ.ಪಿ. ರೇಣುಕಾಚಾರ್ಯ ಅವರು ಭಾವುಕರಾದರು.

ಅಪಘಾತದಲ್ಲಿ ಮೃತಪಟ್ಟಿದ್ದ, 21 ವರ್ಷದ ಶಿವು ಅವರ ‌ಮನೆಗೆ ಆಧಾರವಾಗಿದ್ದದ್ದು ಆತನೊಬ್ಬನೇ. ಆದ್ರೆ ವಿಧಿಯಾಟವೇ ಬೇರೆ ಆಗಿತ್ತು. ಅಪಘಾತದಲ್ಲಿ ಮೃತಪಟ್ಟಿದ್ದು, ಮನೆ ಮಂದಿಯೆಲ್ಲಾ ದಿಕ್ಕೆಟ್ಟು ಕುಳಿತಿದ್ದಾರೆ. ಯಾರೂ ಬಂದರೂ ಸಮಾಧಾನ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಹಿಂದೂ ಯುವ ಕಾರ್ಯಕರ್ತ 21 ವರ್ಷದ ಶಿವು ಸಾವಿನ ಮನೆಗೆ ಶಾಸಕ ರೇಣುಕಾಚಾರ್ಯ ಅವರು ನೀಡಿದ್ದರು. ಈ ವೇಳೆ ಶಾಸಕರ ಕಾಲಿಗೆ ಪೋಷಕರು ಬಿದ್ದು ಗೋಳೋ ಅಂತಾ ಅತ್ತರು. ಈ ವೇಳೆ ಅವರಗೆ ಸಮಾಧಾನದ ಮಾತುಗಳನ್ನಾಡಿದ ರೇಣುಕಾಚಾರ್ಯ ಅವರು ವೈಯಕ್ತಿಕ ಸಹಾಯ ಮಾಡಿದರಲ್ಲದೇ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ನಿಮ್ಮ ಜೊತೆ ನಾನಿದ್ದೇನೆ ಎಂಬ ಭರವಸೆ ನೀಡಿದರು.

Vijayaprabha Mobile App free

ಇನ್ನು ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಕಾರಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅಂತ್ಯಕ್ರಿಯೆಗೆ ಬರಲು ಆಗಿರಲಿಲ್ಲ. ಶಿವು‌‌ ಮನೆಗೆ ಬಂದ‌ ಅವರಿಗೆ ಪೋಷಕರು, ನೆರೆಹೊರೆಯವರ ದುಃಖ ಕಂಡು ಭಾವುಕರಾದರು. ಕಣ್ಣೀರನ್ನೂ ಸುರಿಸಿದರು.

ಚಿಕ್ಕ ವಯಸ್ಸಿಗೆ ಹಿಂದುತ್ವವನ್ನು ಉಸಿರಾಗಿಸಿಕೊಂಡು ಅಪಾರ ಸ್ನೇಹ ಬಳಗವನ್ನು ಹೊಂದಿದ್ದ ಶಿವು ಅವರನ್ನು ‘ಶಿವಾಜಿ’ ಎಂದೇ ಸ್ನೇಹಿತರು ಕರೆಯುತ್ತಿದ್ದರು. ಕಣ್ಣೀರಲ್ಲಿ ಕೈತೊಳೆತ್ತಿರುವ ಅವರ ತಂದೆ ತಾಯಿಗಳ ಆಕ್ರಂದನ ನೋಡಿ ನನ್ನ ಕಣ್ಣುಗಳು ತೆವವಾದವು. ಮಗನ ನೆನೆದು ತಾಯಿಕರುಳ ಆಕ್ರಂದನ ನೋಡಿ ನನಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಶಾಸಕ ರೇಣುಕಾಚಾರ್ಯ ಅವರು ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.