ನವದೆಹಲಿ: ಕೇಂದ್ರ ಸರ್ಕಾರ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪರಿಹಾರ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜುಲೈ 1 ರಿಂದ ಡಿಯರ್ ನೆಸ್ ಅಲೋವನ್ಸ್ (ಡಿಎ) ಸೌಲಭ್ಯ ಲಭ್ಯವಾಗಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಾಕಿ ಇರುವ ಮೂರು ಕಂತುಗಳ ಡಿಎ ಸಿಗಲಿದೆ ಎಂದು ಅವರು ಸಚಿವ ಅನುರಾಗ್ ಠಾಕೂರ್ ಬಹಿರಂಗಪಡಿಸಿದ್ದಾರೆ. ಮೂರು ಕಂತುಗಳ ಡಿಎ ಭತ್ಯೆಯನ್ನು ಕೇಂದ್ರ ಸರ್ಕಾರ ಹಣವನ್ನು ತಡೆಹಿಡಿದಿದ್ದು ತಿಳಿದ ವಿಷಯ. ಜನವರಿ 1, 2020, ಜುಲೈ 1, 2020, ಹಾಗು ಜನವರಿ 1, 2021 ಈ ಮೂರು ಕಂತುಗಳ ಡಿಎ ಸೌಲಭ್ಯ ದೊರೆಯಬೇಕಿದೆ. ಈ ಮೂರು ಕಂತುಗಳ ಡಿಎ ಸೌಲಭ್ಯ ಜುಲೈ 1, 2021 ರಿಂದ ನೌಕರರಿಗೆ ಸಿಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 50 ಲಕ್ಷ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಇನ್ನೂ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಶೇ 17 ರಷ್ಟಿದೆ. ಕೇಂದ್ರ ಸಚಿವ ಸಂಪುಟವು 2020 ರಲ್ಲಿ ಶೇ 4 ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಈ ಡಿಎ ಹೆಚ್ಚಳವು ಜನವರಿ 1, 2020 ರಿಂದ ಅನ್ವಯವಾಗಬೇಕಿತ್ತು. ಕರೋನಾ ವೈರಸ್ ನಿಂದ ಡಿಎ ಹಣವನ್ನು ಕೇಂದ್ರ ಸರ್ಕಾರ ತಡೆಹಿಡಿದಿತ್ತು. ಜುಲೈ 1 ರಿಂದ ಡಿಎ ಸೌಲಭ್ಯ ಮತ್ತೆ ದೊರೆಯಲಿದ್ದು, ಇದರಿಂದ ನೌಕರರ ವೇತನ ಹೆಚ್ಚಾಗುತ್ತದೆ. ಡಿಎ ಹೆಚ್ಚಳದಿಂದಾಗಿ ನೌಕರರ ಎಚ್‌ಆರ್‌ಎ, ಪ್ರಯಾಣ ಭತ್ಯೆ ಮತ್ತು ವೈದ್ಯಕೀಯ ಭತ್ಯೆ ಕೂಡ ಬದಲಾಗುತ್ತದೆ.
ಇದನ್ನು ಓದಿ: ನೌಕರರಿಗೆ, ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ; ಕೇಂದ್ರ ಸರ್ಕಾರದ ಮಹತ್ವದ ಪ್ರಕಟಣೆ!