ಹೆಣ್ಣು ಮಕ್ಕಳು ತಮ್ಮ ತಂದೆಯನ್ನೇ ಮದುವೆಯಾಗಬೇಕು ಎಂಬ ಅನಿಷ್ಟ ಸಂಪ್ರದಾಯ ಭಾರತ ಮತ್ತು ಬಾಂಗ್ಲಾದೇಶದ ಬುಡಕಟ್ಟು ಜನರಲ್ಲಿ ತಲೆ ತಲಾಂತರಗಳಿಂದ ನಡೆದು ಬಂದಿದೆ.
ಹೌದು. ಈ ಬುಡಕಟ್ಟ ಜನಾಂಗವನ್ನು ಬಾಂಗ್ಲಾದಲ್ಲಿ ಮಂಡಿ ಹಾಗೂ ಭಾರತದಲ್ಲಿ ಗಾರೊ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದ್ದು, ಸುಮಾರು 20 ಲಕ್ಷ ಜನರು ಈ ಬುಡಕಟ್ಟಿನಲ್ಲಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿಯೂ ಕೂಡ ಈ ರೀತಿ ವಿಚಿತ್ರ ಆಚರಣೆಗಳನ್ನು ಆಚರಿಸಿಕೊಂಡು ಬರುವ ಮೂಲಕ ಎಲ್ಲರಿಗೂ ಅಚ್ಚರಿ ಮಾಡಿಸಿದೆ ಈ ಬುಡಕಟ್ಟ ಜನಾಂಗ.
ಸೂರ್ಯೋದಯ ಹಾಗು ಸೂರ್ಯಸ್ತದ ಜೀವನದ ಲೆಕ್ಕಾಚಾರದಲ್ಲಿ ಇಂತಹ ಅನಿಷ್ಟ ಸಂಪ್ರದಾಯವನ್ನು ಈ ಗ್ರಾಮಸ್ಥರು ನಡೆಸಿದ್ದು, ಮದುವೆಯಾಗುವ ಪುರಷನ ಆರಂಭದ ದಿನಗಳಲ್ಲಿ ಹೆಂಡತಿ ಜೊತೆಯಾದರೆ, ಇಳಿ ವಯಸ್ಸಿನಲ್ಲಿ ಮಗಳು ಜೊತೆಯಾಗಬೇಕೆಂಬ ನಿಯಮ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಬೇರೆ ಹೆಣ್ಣು ಮಕ್ಕಳಂತೆ ತಮ್ಮ ಮದುವೆಯ ಕನಸುಗಳನ್ನು ಕಾಣುವುದು ಸಾಧ್ಯವಾಗುವುದಿಲ್ಲ. ತಮ್ಮ ಅಪ್ಪನೇ ಗಂಡನಾಗುವಾಗ ಅವರಿಂದ ಯಾವ ನಿರೀಕ್ಷೆಯೂ ಇರಲಾರದು ಎಂಬುದು ತಿಳಿದಿದ್ದು, ತಾಯಂದಿರು ಕೂಡ ಯಾವುದೇ ಅಳುಕಿಲ್ಲದೇ ಹೆತ್ತ ಮಗಳನ್ನು ಗಂಡನೊಟ್ಟಿಗೆ ಬಿಡುತ್ತಾರೆ ಎನ್ನಲಾಗಿದೆ.