ಬೆಂಗಳೂರು: ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಚಿಂತಿತರಾಗಬೇಕಿಲ್ಲ, ನೀವು ನಿಮ್ಮೊಳಗಿನ ಕಚ್ಚಾಟದತ್ತ ಗಮನಹರಿಸಿ ಎಂದು ಕಿಡಿಕಾರಿದ್ದ ಬಿಜೆಪಿ ವಿರುದ್ಧ, ನಿಮ್ಮಲ್ಲಿ “ಇಂಟರ್ನಲ್ ಫೈಟಿಂಗ್ ಲೀಗ್” ನಡೆಯುತ್ತಿದ್ದು, ಜನರು ಕಿಡ್ನಿ ಮಾರಿಕೊಳ್ಳುವ ಸ್ಥಿತಿಯಲ್ಲಿದ್ದಾರೆ, ಅದರತ್ತ ಗಮನಿಸಿ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಡಿಎ ಆಯುಕ್ತ vs ಅಧ್ಯಕ್ಷ, ಸೋಮಶೇಖರ್ ರೆಡ್ಡಿ vs ಆನಂದ್ ಸಿಂಗ್, ಆಯನೂರು ಮಂಜುನಾಥ್ vs ಈಶ್ವರಪ್ಪ, ಬಿಎಸ್ವೈ vs ಸಂತೋಷ್, ಅತೃಪ್ತರು vs ಸಂತೃಪ್ತರು, ಸಚಿವರು vs ಶಾಸಕರು ನಡುವೆ ಫೈಟಿಂಗ್ ನಡೆಯುತ್ತಿದೆ. ಬಿಜೆಪಿ ಕರ್ನಾಟಕ ಪಕ್ಕದಮನೆ ಕತೆ ಬಿಡಿ, ನಿಮ್ಮಲ್ಲಿ “ಇಂಟರ್ನಲ್ ಫೈಟಿಂಗ್ ಲೀಗ್” ನಡೆಯುತ್ತಿದೆ. ಜನರು ಕಿಡ್ನಿ ಮಾರಿಕೊಳ್ಳುವ ಸ್ಥಿತಿಯಲ್ಲಿದ್ದಾರೆ, ಅದರತ್ತ ಗಮನಿಸಿ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಡಿಎ ಆಯುಕ್ತ vs ಅಧ್ಯಕ್ಷ
ಸೋಮಶೇಖರ್ ರೆಡ್ಡಿ vs ಆನಂದ್ ಸಿಂಗ್
ಆಯನೂರು ಮಂಜುನಾಥ್ vs ಈಶ್ವರಪ್ಪ
ಬಿಎಸ್ವೈ vs ಸಂತೋಷ್
ಅತೃಪ್ತರು vs ಸಂತೃಪ್ತರು
ಸಚಿವರು vs ಶಾಸಕರು@BJP4Karnataka ಪಕ್ಕದಮನೆ ಕತೆ ಬಿಡಿ,
ನಿಮ್ಮಲ್ಲಿ “ಇಂಟರ್ನಲ್ ಫೈಟಿಂಗ್ ಲೀಗ್” ನಡೆಯುತ್ತಿದೆ.ಜನರು ಕಿಡ್ನಿ ಮಾರಿಕೊಳ್ಳುವ ಸ್ಥಿತಿಯಲ್ಲಿದ್ದಾರೆ,ಅದರತ್ತ ಗಮನಿಸಿ https://t.co/HuOomXluiK— Karnataka Congress (@INCKarnataka) February 10, 2021