ಉಚಿತ ರೀಚಾರ್ಜ್ ಪ್ಲಾನ್: ಜಿಯೋ, ಏರ್‌ಟೆಲ್, ವೊಡಾಫೋನ್ ಗ್ರಾಹಕರಿಗೆ ಎಚ್ಚರಿಕೆ!

ನೀವು ಮೊಬೈಲ್ ಫೋನ್ ಬಳಸುತ್ತಿದ್ದೀರಾ? ಅಗಾದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದಿರಬೇಕು. ಉಚಿತ ರೀಚಾರ್ಜ್ ಯೋಜನೆಗಳ ಬಗ್ಗೆ ಜಾಗರೂಕರಾಗಿರಬೇಕು ಇಲ್ಲದಿದ್ದರೆ ಮೋಸ ಹೋಗುವ ಪರಿಸ್ಥಿತಿ ಬರುತ್ತದೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ…

mobile phone vijayaprabha news

ನೀವು ಮೊಬೈಲ್ ಫೋನ್ ಬಳಸುತ್ತಿದ್ದೀರಾ? ಅಗಾದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದಿರಬೇಕು. ಉಚಿತ ರೀಚಾರ್ಜ್ ಯೋಜನೆಗಳ ಬಗ್ಗೆ ಜಾಗರೂಕರಾಗಿರಬೇಕು ಇಲ್ಲದಿದ್ದರೆ ಮೋಸ ಹೋಗುವ ಪರಿಸ್ಥಿತಿ ಬರುತ್ತದೆ.

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಿಒಎಐ (COAI) ಇತ್ತೀಚೆಗೆ ಸಾರ್ವಜನಿಕರಿಗೆ ನಕಲಿ ಸಂದೇಶಗಳಿಗೆ ಒಳಗಾಗದಂತೆ ಎಚ್ಚರಿಕೆಯ ಸಂದೇಶ ನೀಡಿದ್ದು, ನಕಲಿ ಸಂದೇಶಗಳಿಂದ ಮೋಸ ಹೋಗುವ ಅಪಾಯವಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರವು ಆನ್‌ಲೈನ್ ಶಿಕ್ಷಣಕ್ಕಾಗಿ 10 ಕೋಟಿ ಗ್ರಾಹಕರನ್ನು ಉಚಿತವಾಗಿ ಮರುಚಾರ್ಜ್ ಮಾಡುತ್ತಿದೆ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದು ನಕಲಿಯೆಂದು, ಕೇಂದ್ರ ಸರ್ಕಾರ ಯಾವುದೇ ಉಚಿತ ರೀಚಾರ್ಜ್ ಯೋಜನೆಗಳನ್ನು ನೀಡಿಲ್ಲ ಎಂದು ಸಿಒಎಐ ಸ್ಪಷ್ಟಪಡಿಸಿದೆ. ಆದ್ದರಿಂದ ಸಾಮಾನ್ಯ ಜನರು ಜಾಗರೂಕರಾಗಿರಲು ಹೇಳಿದ್ದು, ವಂಚಕರಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದು, ಇದೇ ರೀತಿಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಸೂಚಿಸಿದೆ.

Vijayaprabha Mobile App free

ನಿಮಗೆ ಉಚಿತ ರೀಚಾರ್ಜ್ ಪ್ಲಾನ್ ಎಂದು ಬರುವ ಸಂದೇಶಗಳಲ್ಲಿ ಯಾವುದೇ ಲಿಂಕ್‌ಗಳಿದ್ದರೆ, ಅವುಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಸಿಒಎಐ ಹೇಳಿದೆ. ಒಂದು ವೇಳೆ ಕ್ಲಿಕ್ ಮಾಡಿ ವಿವರಗಳನ್ನು ನೀಡಿದರೆ, ನೀವು ತೊಂದರೆಗೆ ಸಿಲುಕಿ, ಮೋಸ ಹೋಗಬಹುದು ಎಂದು ಸೂಚಿಸಿದೆ. ಆದ್ದರಿಂದ ಮೊಬೈಲ್ ಫೋನ್ ಬಳಸುವವರು ಜಾಗರೂಕರಾಗಿರಬೇಕು.

ನಿಮಗೆ ಈ ರೀತಿಯ ಯಾವುದೇ ಉಚಿತ ರೀಚಾರ್ಜ್ ಪ್ಲಾನ್ ಸಂದೇಶವನ್ನು ಬಂದರೆ ನೀವು ಜಾಗರೂಕರಾಗಿರಬೇಕು ಎಂದು ಸಿಒಎಐ ಹೇಳಿದೆ. ಅಂತಹ ಸಂದೇಶಗಳನ್ನು ತಕ್ಷಣ ಡಿಲೀಟ್ ಮಾಡಲು ಹೇಳಿದ್ದು, ಇನ್ನೂ ಯಾರೂ ಈ ರೀತಿಯ ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ. ಇಂತಹ ಸಂದೇಶಗಳನ್ನು ಡಿಲೀಟ್ ಮಾಡುವುದರಿಂದ ಇತರರು ಮೋಸ ಹೋಗದೆ ಇರುತ್ತಾರೆ ಎಂದು ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.