ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕರರ ತುಟ್ಟಿ ಭತ್ಯೆಯನ್ನು ಹಾಗೂ ತುಟ್ಟಿ ಪರಿಹಾರವನ್ನು ಶೇ 4ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ.
ಇದನ್ನು ಓದಿ: ಮುಸ್ಲಿಮರ 2ಬಿ ಮೀಸಲಾತಿ ರದ್ದುಗೊಳಿಸಿ, ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ; ಯಾರಿಗೆ ಎಷ್ಟು ಮೀಸಲಾತಿ, ಇಲ್ಲಿದೆ ಸಂಪೂರ್ಣ ಮಾಹಿತಿ
ಹೌದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ತುಟ್ಟಿಭತ್ಯೆಯನ್ನು ಶೇ.38ರಿಂದ ಶೇ.42ಕ್ಕೆ ಹೆಚ್ಚಿಸಲಾಗಿದೆ. ಮೋದಿ ಸರ್ಕಾರದ ಈ ನಿರ್ಧಾರದಿಂದ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾದೆ.
ಇದನ್ನು ಓದಿ: ಕ್ರಿಕೆಟ್ ಅಭಿಮಾನಿಗಳಿಗೆ Jio ವಿಶೇಷ ಕೊಡುಗೆ; 40 GB ವರೆಗೆ ಉಚಿತ ಡೇಟಾ, Jio 3 ಪ್ರಿಪೇಯ್ಡ್ ಯೋಜನೆಗಳು ಇವೆ
ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ?
ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಜನವರಿ 1, 2023ರಿಂದ ಅನ್ವಯವಾಗುವಂತೆ ಪರಿಗಣಿಸಲಾಗುತ್ತದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ.
ಉದಾಹರಣೆಗೆ ಮೂಲ ವೇತನ 25,500 ರೂ. ಎಂದಿಟ್ಟುಕೊಳ್ಳಿ. ಶೇ.38ರಷ್ಟು DA ಪ್ರಕಾರ ಈಗ 9,690 ರೂ. ಸಿಗುತ್ತದೆ. DA ಶೇ.42 ಆದರೆ, ತುಟ್ಟಿಭತ್ಯೆ 10,710ರೂ.ಗೆ ಏರಿಕೆಯಾಗಲಿದೆ. ಅಂದರೆ ಪ್ರತಿ ತಿಂಗಳು 1,020ರೂ.ಗಳಷ್ಟು ಸಂಬಳ ಹೆಚ್ಚಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12,815.60 ಕೋಟಿ ರೂ.ಗಳ ಹೊರೆ ಬೀಳಲಿದೆ.
ಇದನ್ನು ಓದಿ: ಬೆಂಗಳೂರು ಮೆಟ್ರೋದಲ್ಲಿ ಖಾಯಂ ಉದ್ಯೋಗ; ತಿಂಗಳಿಗೆ 25,000 ರಿಂದ 94500 ರೂ ಸಂಬಳ, ಇಂದೇ ಅರ್ಜಿ ಸಲ್ಲಿಸಿ