ದಾವಣಗೆರೆ: ಕೊರೋನಾ ಮತ್ತು ರಾಜ್ಯ ಸರ್ಕಾರದ ಕುರಿತು ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಡಿಸೆಂಬರ್ವರೆಗೆ ಜಲಪ್ರಳಯದಂಥ ಪ್ರಸಂಗಗಳು ಇವೆ. ಮನುಷ್ಯ ಎಲ್ಲ ಮರೆತ್ತಿದ್ದಾನೆ. ಸತ್ಯ ಸತ್ತು ಹೋಗಿದೆ, ಜನರು ಮೋಸದಲ್ಲಿ ತೊಡಗಿದ್ದಾರೆ.
ಗ್ರಹಣದ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಏರಿಳಿತ- ಅಶಾಂತಿ ಕಾಣಲಿದೆ’ ಎಂದರು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಬಿಎಸ್ ವೈ ಅಧಿಕಾರಾವಧಿ ಪೂರ್ಣಗೊಳಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿದ್ದರಾಮಯ್ಯ ಭವಿಷ್ಯ ನುಡಿದ ಕೋಡಿಮಠದ ಶ್ರೀ
ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಮುಂದಿನ ದಿನಗಳಲ್ಲಿ ಯೋಗವಿದ್ದು, ಒಳ್ಳೆಯ ಅವಕಾಶಗಳಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ಸೇರಿದಂತೆ ಎಲ್ಲೆಡೆ ರಾಜಕೀಯ ವಿಪ್ಲವ ಆಗುತ್ತಿದೆ. ಗ್ರಹಣ ಫಲದಲ್ಲಿ ಕೆಟ್ಟದಿದೆ, ಜಗತ್ತಿನಲ್ಲಿ ರಾಜಕೀಯ ವಿಪ್ಲವ ಆಗಲಿದೆ. ಕರ್ನಾಟಕ ರಾಜಕೀಯದಲ್ಲೂ ಬದಲಾವಣೆ ಆಗಲಿದೆ. ಸಿಎಂ ಬದಲಾವಣೆ ಬಗ್ಗೆ ನಾನು ಭವಿಷ್ಯ ಹೇಳಿದರೆ ಊರಿಗೆ ಹೋಗೋದೇ ಕಷ್ಟ ಎಂದು ಹೇಳಿದ್ದು, ದುಡ್ಡು ಮಾತನಾಡ್ತಾ ಇದೆ ಎಂದು ಹೇಳಿದರು.