ತಾಯಿ ಭಾಗ್ಯ ಯೋಜನೆ : ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ತಾಯಿ ಭಾಗ್ಯ ಯೋಜನೆ ಕೂಡಾ ಒಂದಾಗಿದೆ.
2009ರಲ್ಲಿ ಆರಂಭವಾದ ಈ ಯೋಜನೆಯ ಉದ್ದೇಶ, ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಿಯರಿಗೆ ಉಚಿತ ಚಿಕಿತ್ಸೆ ನೀಡುವುದಾಗಿದೆ. ತಾಯಿ ಭಾಗ್ಯ ಯೋಜನೆಯಡಿಯಲ್ಲಿ, ಗರ್ಭಿಣಿಯಾದಾಗಿನಿಂದ ಮಗು ಹೆತ್ತು ಕೆಲವು ಸಮಯದವರೆಗೂ ಉಚಿತ ಚಿಕಿತ್ಸೆ ಸೌಲಭ್ಯವನ್ನು ಒದಗಿಸುತ್ತದೆ. ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ನಿಗದಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
ತಾಯಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗೊತ್ತಿರಲೇಬೇಕಾದ ವಿಷಯಗಳು
ತಾಯಿ ಭಾಗ್ಯ ಯೋಜನೆಯು ಬಡ ವರ್ಗದ ಮಹಿಳೆಯರು ಉಚಿತವಾಗಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಅಡ್ಮಿಟ್ ಆಗಲು ಬಯಸುವ ಆಸ್ಪತ್ರೆಯಲ್ಲಿ ತಾಯಿ ಭಾಗ್ಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲ ಎರಡು ಮಕ್ಕಳ ಹೆರಿಗೆ ವೇಳೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವು ಪ್ರತಿ ಡೆಲಿವರಿಗೆ 3000 ರೂಪಾಯಿ ಪಾವತಿಸುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ಡೆಲಿವರಿಗೆ 1500 ರೂಪಾಯಿ ಪಾವತಿಸುತ್ತದೆ. ಎಲ್ಲ ರೀತಿಯ ಡೆಲಿವರಿಯೂ ಇದರಲ್ಲಿ ಒಳಗೊಳ್ಳುತ್ತದೆ.
ಇದನ್ನೂ ಓದಿ: Fastest internet | ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್ನೆಟ್ ಸ್ಪೀಡ್ ಹೊಂದಿರುವ ರಾಷ್ಟ್ರಗಳು
ತಾಯಿ ಭಾಗ್ಯ ಯೋಜನೆಗೆ ಈ ರೀತಿಯಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು
ತಾಯಿ ಭಾಗ್ಯ ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಬಹುದು. ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ. ನೀವು ಹೊಸ ಬಳಕೆದಾರರಾಗಿದ್ದರೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ನಿಮ್ಮ ನೋಂದಣಿ ವಿವರಗಳನ್ನು ಬಳಸಿಕೊಂಡು ಲಾಗಿನ್ ಆಗಿ. ತಾಯಿ ಭಾಗ್ಯ ಯೋಜನೆಗೆ ಸಂಬಂಧಿಸಿದ ಅರ್ಜಿಯನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ದಾಖಲೆಗಳನ್ನು ಅಪ್ಲೋಡ್ ಮಾಡಿ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
ತಾಯಿ ಭಾಗ್ಯ ಯೋಜನೆಯಿಂದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು
ತಾಯಿ ಭಾಗ್ಯ ಯೋಜನೆಯಿಂದ ಫಲಾನುಭವಿಗಳು ತಮ್ಮ ನಿವಾಸದ ಸಮೀಪವಿರುವ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ ಸೇವೆ ಪಡೆಯಬಹುದು. ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಅಗತ್ಯವಿರುವ ಔಷಧಿಗಳು ಮತ್ತು ಇತರ ಆರೋಗ್ಯ ಸೇವೆಗಳ ವೆಚ್ಚವನ್ನು ಯೋಜನೆ ಭರಿಸುತ್ತದೆ. ನೋಂದಾಯಿತ ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು, ಶಿಶುವೈದ್ಯರು ಸೇರಿದಂತೆ ತಜ್ಞ ವೈದ್ಯರು ಲಭ್ಯವಿರುತ್ತಾರೆ. ಯೋಜನೆಯಲ್ಲಿ ಭಾಗವಹಿಸುವ ಆಸ್ಪತ್ರೆಗಳು ಪ್ರತಿ 100 ಹೆರಿಗೆಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಪಡೆಯುತ್ತವೆ.
ಇದನ್ನೂ ಓದಿ: Tractor subsidy | ಕೇಂದ್ರ ಸರ್ಕಾರದಿಂದ ಟ್ರ್ಯಾಕ್ಟರ್ ಖರೀದಿಗೆ 3 ಲಕ್ಷ ಸಬ್ಸಿಡಿ
ಗರ್ಭಿಣಿಯರಿಗೆ ಕರ್ನಾಟಕ ಸರ್ಕಾರದ ತಾಯಿ ಕಾರ್ಡ್ ಎಲ್ಲಿ ಸಿಗುತ್ತದೆ?
ಕರ್ನಾಟಕ ಸರ್ಕಾರದ ತಾಯಿ ಕಾರ್ಡ್ (ತಾಯಿ ಭಾಗ್ಯ ಕಾರ್ಡ್) ಪಡೆಯಲು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬೇಕು. ಅರ್ಹ ಗರ್ಭಿಣಿಯರಿಗೆ ತಾಯಿ ಭಾಗ್ಯ ಕಾರ್ಡ್ ನೀಡುವ ಜವಾಬ್ದಾರಿಯನ್ನು ಈ ಕೇಂದ್ರಗಳು ಹೊಂದಿವೆ. ಇನ್ನು ತಾಯಿ ಕಾರ್ಡ್ ಮಾಡಿಸುವುದರಿಂದ ಗರ್ಭಿಣಿಯರಿಗೆ ಅಥವಾ ಹಾಲುಣಿಸುವ ತಾಯಂದಿರಿಗೆ ಏನೆಲ್ಲಾ ಉಪಯೋಗ ಇದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: ವಿಶೇಷ ವಾಣಿ