ಮೀರತ್: ಪತ್ನಿ ಜೀನ್ಸ್ ಧರಿಸಿ, ಡ್ಯಾನ್ಸ್ ಮಾಡುತ್ತಿಲ್ಲ ಎಂದು ಕೋಪಗೊಂಡ ಪತಿ ತಲಾಕ್ ನೀಡಿದ್ದಾನೆ. ಆ ನಂತರ ಅವನು ತನ್ನ ಮಾವನ ಮನೆಗೆ ಹೋಗಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಇನ್ನು ತನ್ನ ಸುತ್ತಮುತ್ತಲಿನ ಸಮಯೋಚಿತ ಸಹಾಯದಿಂದ ಆ ವ್ಯಕ್ತಿ ಸಾವಿನಿಂದ ತಪ್ಪಿಸಿಕೊಂಡಿದ್ದಾನೆ. ಆತನನ್ನು ರಕ್ಷಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಅವರು ಎಂಟು ವರ್ಷಗಳ ಹಿಂದೆ ಮೀರತ್‌ನ ನ್ಯೂ ಇಸ್ಲಾಂನಗರದ ಅಮಿರುದ್ದೀನ್ ಅವರ ಪುತ್ರಿ ಮಹಾಜಬಿಯನ್ನು, ಹಾಪುರದ ಪಿಲ್ಖುವಾಕು ಸೇರಿದ ಅನಸ್ ಕೊಟ್ಟು ಮದುವೆ ಮಾಡಿದ್ದರು.
ಆದರೆ ಅಸನ್ ಕೆಲವು ವರ್ಷಗಳಿಂದ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಅವನ ಕಿರುಕುಳವನ್ನು ಸಹಿಸಲಾಗದೆ ಹೆಂಡತಿ ಬಿಟ್ಟು ತವರು ಮನೆಗೆ ಹೋಗಿದ್ದಾಳೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದರಿಂದ ಹಿರಿಯರು ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಪತಿ ಜೀನ್ಸ್ ಧರಿಸಲು ಮತ್ತು ಡ್ಯಾನ್ಸ್ ಮಾಡಲು ಒತ್ತಾಯಿಸುತ್ತಿದ್ದಾನೆ ಎಂದು ಮಹಾಜಾಬಿ ಆರೋಪಿಸಿದ್ದಾಳೆ. ಇದರಿಂದ ಹಿರಿಯರು ಆಸನ್ ಬುದ್ದಿ ಹೇಳಿ ಮನೆಗೆ ಕಳುಹಿಸಿದ್ದಾರೆ.
ಆದರೆ, ಎರಡು ದಿನಗಳ ಹಿಂದೆ ಮಾವನ ಮನೆಗೆ ಬಂದ ಅನಸ್,ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ನಂತರ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಅನಸ್ ಅಕ್ಕಪಕ್ಕದವರು ಅವನ ಮೇಲೆ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ದರೊಂದಿಗೆ ಅನಸ್ ತನ್ನ ಪ್ರಾಣ ಅಪಾಯದಿಂದ ತಪ್ಪಿಸಿಕೊಂಡು ಪಾರಾಗಿದ್ದಾನೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಅನಸ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.