India vs pakisthan : ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನ 7ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ರೋಚಕ ಗೆಲವು ಸಾಧಿಸಿದೆ.
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್‌ಗಳನ್ನು ಗಳಿಸಿತು. ಪಾಕಿಸ್ತಾನ ಪರ ಮುನೀಬಾ ಅಲಿ 17, ನಿದಾ ದಾರ್ 28, ಫಾತಿಮಾ ಸನಾ 13, ಸೈಯದಾ ಅರೂಬ್ ಶಾ 14 ರನ್ ಗಳಿಸಿದರು. ಟೀಮ್ ಇಂಡಿಯಾ ಪರ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ರಾಜ್ಯದಲ್ಲಿ ಈ ವಾರ ನಡೆದ ಪ್ರಮುಖ ಸುದ್ದಿಗಳು; ಇಲ್ಲದೆ ಪಟಾಫಟ್ ನ್ಯೂಸ್
ಇನ್ನು, ಪಾಕಿಸ್ತಾನ ನೀಡಿದ 105 ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 18.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಗೆಲುವು ಸಾಧಿಸಿತು. ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ 32, ಜೆಮಿಮಾ ರಾಡ್ರಿಗಸ್ 23, ಹರ್ಮನ್‌ಪ್ರೀತ್ ಕೌರ್ 29 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಪಾಕಿಸ್ತಾನ ಪರ ಫಾತಿಮಾ ಸನಾ 2, ಸಾದಿಯಾ ಇಕ್ಬಾಲ್ ಹಾಗು ಒಮೈಮಾ ಸೊಹೈಲ್ ತಲಾ ಒಂದು ವಿಕೆಟ್ ಪಡೆದರು.