ನವದೆಹಲಿ: ಆಭರಣ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಕೇಂದ್ರದ ಮೋದಿ ಸರ್ಕಾರ ದೇಶಾದ್ಯಂತ ಗೋಲ್ಡ್ ಹಾಲ್ ಮಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲಿದೆ. ಈ ನಿಯಮಗಳು ಮುಂದಿನ ವರ್ಷದಿಂದ ಜಾರಿಗೆ ಬರಲಿವೆ. ಈ ವರ್ಷದ ಜನವರಿಯಲ್ಲಿ ಗೋಲ್ಡ್ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.
ಕೇಂದ್ರ ಸರ್ಕಾರದ ಗೋಲ್ಡ್ ಹಾಲ್ ಮಾರ್ಕಿಂಗ್ ನಿಯಮ ಜೂನ್ 1, 2021 ರಿಂದ ಜಾರಿಗೆ ಬರಲಿವೆ. ಈ ನಿಯಮಗಳು ರಾಷ್ಟ್ರವ್ಯಾಪಿ ಅನ್ವಯಿಸುತ್ತದೆ. ಈ ಹೊಸ ನಿಯಮಗಳಿಂದಾಗಿ ಆಭರಣ ಕಂಪನಿಗಳು ಖರೀದಿದಾರರನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೊಸ ಗ್ರಾಹಕ ಉತ್ಪಾದನಾ ಕಾಯ್ದೆಯೂ( consumer production act) ಜಾರಿಗೆ ಬಂದಿದೆ.
ಒಂದು ವೇಳೆ ಆಭರಣಕಾರರು ಖರೀದಿದಾರರನ್ನು ಮೋಸಗೊಳಿಸಿದರೆ ಕಠಿಣವಾದ ಶಿಕ್ಷೆ ಎದುರಿಸಬೇಕಾಗುತ್ತದೆ. ಭಾರಿ ದಂಡ ವಿಧಿಸುತ್ತದೆ. ನಿಮಗೆ 18 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡಿ 22 ಕ್ಯಾರೆಟ್ ಚಿನ್ನ ಎಂದು ಹೇಳಿದರೆ ಆಭರಣಕಾರರಿಗೂ ಜೈಲು ಶಿಕ್ಷೆ ಕೂಡ ಆಗುತ್ತದೆ. ಗೋಲ್ಡ್ ಹಾಲ್ ಮಾರ್ಕಿಂಗ್ ನಿಯಮಗಳು ಜೂನ್ 1, 2021 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿವೆ.
ಈಗ ಎಲ್ಲಾ ಆಭರಣ ಮಾರಾಟಗಾರರು ಕೂಡ ಬಿಐಎಸ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಬಿಐಎಸ್ ದೇಶದ ಏಕೈಕ ಗೋಲ್ಡ್ ಹಾಲ್ ಮಾರ್ಕಿಂಗ್ ಆಗಿದೆ. ಹಾಲ್ ಮಾರ್ಕಿಂಗ್ ಅಡಿಯಲ್ಲಿ ನೀವು ಖರೀದಿಸಿದ ಚಿನ್ನವನ್ನು ಮರುಮಾರಾಟ ಮಾಡಿದರೂ ಕಡಿಮೆ ಬೆಲೆಗಿಂತ, ನಿಮಗೆ ಉತ್ತಮ ದರವನ್ನು ನೀಡುತ್ತದೆ.